BIG NEWS: ಉಪಚುನಾವಣಾ ದಿನಾಂಕ ಬದಲಿಸಿದ ಚುನಾವಣಾ ಆಯೋಗ

ನವದೆಹಲಿ: ಕೇಂದ್ರ ಚುನವಣಾ ಆಯೋಗ ಮೂರು ರಾಜ್ಯಗಳ ಉಪಚುನಾವಣಾ ದಿನಾಂಕವನ್ನು ಬದಲಿಸಿದೆ.

ಚುನಾವಣಾ ಸಮೀತಿ ನವೆಂಬರ್ 13ರಂದು 48 ವಿಧಾನಸಭಾ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿತ್ತು. ಆದರೆ ಈಗ ಉತ್ತರ ಪ್ರದೇಶ, ಪಂಚಾಬ್ ಹಾಗೂ ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆ ದಿನಾಂಕವನ್ನು ಬದಲಾವಣೆ ಮಾಡಿದೆ.

ಮೂರು ರಾಜ್ಯಗಳಲ್ಲಿ ನವೆಂಬರ್ 13ರ ಬದಲಾಗಿ ನವೆಂಬರ್ 20ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ. ಕೇರಳದ ಪಾಲಕ್ಕಾಡ್, ಪಂಜಾಬ್ ನ ಡೇರಾ ಬಾರಾ ನಾನಕ್, ಛಬೆವಾಲ್, ಗಿಡ್ಡರ್ಬಾಹಾ, ಬರ್ನಾಲಾ, ಉತ್ತರ ಪ್ರದೇಶದ ಮೀರಾಪುರ, ಕುಂದರ್ಕಿ, ಘಾಜಿಯಾಬಾದ್, ಖೇರ್, ಕರ್ಹಾಲ್, ಸಿಶಾಮೌ, ಫುಲ್ಪರ್, ಕತೇಹಾರಿ, ಮಜವಾನ್ ಕ್ಷೇರಗಳಲ್ಲಿ ನ.20ರಂದು ಉಪಚುನಾವಣೆ ನಡೆಯಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read