‘ಚುನಾವಣಾ ಬಾಂಡ್’ ಗಳು ಬಿಜೆಪಿಯ ಭ್ರಷ್ಟ ನೀತಿಗೆ ಸಾಕ್ಷಿಯಾಗಿತ್ತು : ‘ಸುಪ್ರೀಂ’ ತೀರ್ಪು ಸ್ವಾಗತಿಸಿದ ರಾಹುಲ್ ಗಾಂ‍ಧಿ

ನವದೆಹಲಿ : ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ.ಈ ಬಾಂಡ್ ಯೋಜನೆಯು ಅಸಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ತೀರ್ಪನ್ನು ರಾಹುಲ್ ಗಾಂಧಿ ಸ್ವಾಗತಿಸಿದ್ದು, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಗಳು ಬಿಜೆಪಿಯ ಭ್ರಷ್ಟ ನೀತಿಗೆ ಸಾಕ್ಷಿಯಾಗಿತ್ತು ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂ‍ಧಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

ನರೇಂದ್ರ ಮೋದಿಯವರ ಭ್ರಷ್ಟ ನೀತಿಗಳಿಗೆ ಮತ್ತೊಂದು ಪುರಾವೆ ನಿಮ್ಮ ಮುಂದೆ ಇದೆ.ಲಂಚ ಮತ್ತು ಕಮಿಷನ್ ಪಡೆಯಲು ಬಿಜೆಪಿ ಚುನಾವಣಾ ಬಾಂಡ್ ಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿತ್ತು. ಚುನಾವಣಾ ಬಾಂಡ್ ಗಳು ಬಿಜೆಪಿಯ ಭ್ರಷ್ಟ ನೀತಿಗೆ ಸಾಕ್ಷಿಯಾಗಿತ್ತು, ಇಂದು ಈ ವಿಷಯಕ್ಕೆ ಮುದ್ರೆ ಒತ್ತಲಾಗಿದೆ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂ‍ಧಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read