ಇಂದಿನ ಜಗತ್ತಿನಲ್ಲಿ ನಿಜವಾದ ಪ್ರೀತಿಯ ಪರಿಕಲ್ಪನೆಯು ಸಾಕಷ್ಟು ದುರ್ಬಲವಾಗಿದೆ. ಇನ್ನೊಬ್ಬರ ಮೇಲೆ ಕಾಳಜಿ ತೋರಲು ಜನರಿಗೆ ಸಮಯವೇ ಇಲ್ಲವಾಗಿದೆ. ಶುದ್ಧ ಪ್ರೀತಿ ಹೇಗಿರುತ್ತದೆ ಎಂಬುದನ್ನು ಪ್ರದರ್ಶಿಸುವ ವೀಡಿಯೊ ಒಂದು ಇದೀಗ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಜೆನಿಫರ್ ರೆಹಮಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ, ವಯಸ್ಸಾದ ದಂಪತಿಗಳನ್ನು ಒಳಗೊಂಡಿರುವ ವೀಡಿಯೊ ವೈರಲ್ ಆಗಿದೆ.
ವೀಡಿಯೊದಲ್ಲಿ, ದಂಪತಿ ರಸ್ತೆಯ ಉದ್ದಕ್ಕೂ ನಡೆಯುವುದನ್ನು ಕಾಣಬಹುದು. ವಿಡಿಯೋ ಮುಂದುವರಿದಂತೆ, ವಯಸ್ಸಾದ ಪುರುಷ, ಮಹಿಳೆಯ ಕೈ ಹಿಡಿದು ಜೋಪಾನವಾಗಿ ನಡೆಯುವುದನ್ನು ಕಾಣಬಹುದು. ಇಂಥ ಸನ್ನಿವೇಶಗಳು ಆಗಿಂದಾಗ್ಗೆ ನೋಡಲು ಸಿಗುವುದಾದರೂ ತುಂಬಾ ಅಪರೂಪದ ಈ ಜೋಡಿಯ ವಿಡಿಯೋ ವೈರಲ್ ಆಗಿದೆ. ವೀಡಿಯೊ 477k ಲೈಕ್‌ಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.
https://youtu.be/SRMs033pJ1s