ನವವಿವಾಹಿತೆ ಅಪಹರಿಸಿ ಗಂಡನ ಎದುರಲ್ಲೇ ಗ್ಯಾಂಗ್ ರೇಪ್: 8 ಮಂದಿಗೆ ಜೀವ ಇರುವವರೆಗೂ ಸೆರೆವಾಸದ ಶಿಕ್ಷೆ

ರೇವಾ: ಪತಿಯೊಂದಿಗೆ ನವವಿವಾಹಿತೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಧ್ಯಪ್ರದೇಶದ ರೇವಾ ನ್ಯಾಯಾಲಯ 8 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರತಿ ಅಪರಾಧಿಗೂ ತಲಾ 2.30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ರೇವಾ ಜಿಲ್ಲಾ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮಾ ಜಾಧವ್ ಬುಧವಾರ 8 ಆರೋಪಿಗಳ ವಿರುದ್ಧ ತೀರ್ಪು ನೀಡಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ರಾಮಕಿಶನ್,  ಗರುಡ್ ಕೋರಿ, ರಾಕೇಶ್ ಗುಪ್ತಾ, ಸುಶೀಲ್ ಕೋರಿ, ರಜನೀಶ್ ಕೋರಿ, ದೀಪಕ್, ರಾಜೇಂದ್ರ, ಲವಕುಶ ಕೋರಿ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ವಿಕಾಸ್ ದ್ವಿವೇದಿ ವಾದ ಮಂಡಿಸಿದ್ದರು.

ಗುದ್ದು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ 2024ರ ಅಕ್ಟೋಬರ್ 21ರಂದು ಘಟನೆ ನಡೆದಿತ್ತು. ಬೆಟ್ಟದ ಮೇಲಿರುವ ದೇವಾಲಯದಿಂದ ನವವಿವಾಹಿತ ದಂಪತಿ ಮನೆಗೆ ವಾಪಸ್ ಆಗುವಾಗ ಅವರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು. ಆರು ಜನ ಅಪರಾಧಿಗಳು ಮದ್ಯ ಸೇವಿಸಿದ್ದು, ಸರದಿಯಂತೆ ಗಂಡನ ಎದುರಲ್ಲೇ ನವವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದರು. ಇಬ್ಬರು ಸಹಾಯ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read