ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ: ಮನೆ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ

ಬೆಂಗಳೂರು: ದಂಪತಿ ನಡುವೆ ಗಲಾಟೆಯಾಗಿ ಮನೆ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿಗೆ ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ.

31 ವರ್ಷದ ಪೂಜಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಉತ್ತರ ಪ್ರದೇಶ ಮೂಲದ ಪೂಜಾ ಪತಿ ಅನಿಲ್ ಕುಮಾರ್(35) ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಊಟದ ವೇಳೆ ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ನಾನು ಮನೆ ಯಜಮಾನ ನನಗೆ ಒಂದು ಮೊಟ್ಟೆ ಹೆಚ್ಚು ಬೇಕೆಂದು ಪತಿ ಜಗಳವಾಡಿದ್ದಾನೆ. ಊಟಕ್ಕೆ ಕುಳಿತಾಗ ಪತ್ನಿ ಪೂಜಾ ಮೇಲೆ ಅನಿಲ್ ಹಲ್ಲೆ ಮಾಡಿದ್ದಾನೆ. ಪತಿಯ ತಾರತಮ್ಯ ಭಾವನೆಗೆ ಬೇಸತ್ತು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂತರ ಕುಟುಂಬ ಸದಸ್ಯರಿಗೆ ಪೂಜಾ ಮೃತದೇಹ ಹಸ್ತಾಂತರ ಮಾಡಲಾಗಿದೆ. ಪೂಜಾ ಆತ್ಮಹತ್ಯೆಗೆ ಕಾರಣವಾದ ಪತಿ ಅನಿಲ್ ಕುಮಾರ್ ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read