ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ಉತ್ಪಾದನೆ ಶೇ. 15 ರಷ್ಟು ಕುಸಿತ

ಬೆಂಗಳೂರು: ಭಾರೀ ಬಿಸಿಲ ಬೇಗೆ, ಕೋಳಿ ಆಹಾರದ ಹೆಚ್ಚಳ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕೋಳಿ ಸಾಕಾಣೆ ಮೇಲೆ ಪರಿಣಾಮ ಉಂಟಾಗಿದ್ದು, ಮೊಟ್ಟೆ ಉತ್ಪಾದನೆಯಲ್ಲಿ ಶೇಕಡ 15 -20 ರಷ್ಟು ಕುಸಿತವಾಗಿದೆ.

ರಾಜ್ಯದಲ್ಲಿ ಪ್ರತಿದಿನ 1.25 ರಿಂದ 1.50 ಕೋಟಿ ಕೋಳಿ ಮೊಟ್ಟೆ ಉತ್ಪಾದನೆಯಾಗುತ್ತಿದ್ದು, ಈ ಬಾರಿ ಸಾಕಾಣೆ ವೆಚ್ಚ ಬಾರಿ ದುಬಾರಿಯಾಗಿದೆ. ಕೋಳಿ ಆಹಾರವಾದ ಸೋಯಾ ಹಿಂಡಿ, ಕಡ್ಲೆಕಾಯಿ ಹಿಂಡಿ, ಸೂರ್ಯಕಾಂತಿ ಹಿಂಡಿ, ಅಕ್ಕಿ ತೌಡು, ಮುಸುಕಿನ ಜೋಳ ಮೊದಲಾದವುಗಳ ಬೆಲೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶೇಕಡ 100ರಷ್ಟು ಏರಿಕೆಯಾಗಿದ್ದು, ಕೋಳಿ ಸಾಕಾಣಿಕೆ ಹೊರೆಯಾಗಿ ಪರಿಣಮಿಸಿದೆ. ಸಂಕಷ್ಟದಲ್ಲಿ ಕೋಳಿ ಸಾಕಾಣಿಕೆ ಉದ್ಯಮ ನಡೆಸುವಂತಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಮೊಟ್ಟೆ ದರ ಇಳಿಕೆಯಾಗುತ್ತಿದ್ದರೂ ಈ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೇಸಿಗೆಯಲ್ಲಿ ಬಿಸಿಯ ವಾತಾವರಣದಿಂದ ಮೊಟ್ಟೆ ಉತ್ಪಾದನೆ ಹೆಚ್ಚಾಗುತ್ತದೆ. ಹೆಚ್ಚು ದಿನ ಸಂಗ್ರಹಿಸಿ ಇಡಲು ಸಾಧ್ಯವಾಗುವುದಿಲ್ಲ. ಸಾಕಾಣಿಕೆ ಕಷ್ಟವಾಗಿ ಈ ಬಾರಿ ಕೋಳಿ ಸಂಖ್ಯೆ ಕಡಿಮೆಯಾಗಿ ಮೊಟ್ಟೆ ಉತ್ಪಾದನೆ ಶೇಕಡ 15 ರಿಂದ 20ರಷ್ಟು ಕಡಿಮೆಯಾಗಿದೆ. ಚಳಿಗಾಲದಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಕಡಿಮೆ ಇರುತ್ತದೆ. ಈ ಬಾರಿ ನಾನಾ ಕಾರಣಗಳಿಂದ ಮೊಟ್ಟೆ ಉತ್ಪಾದನೆ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read