ಮಾನ್ಯತೆ ನವೀಕರಿಸದ ಖಾಸಗಿ ಪ್ರೌಢ ಶಾಲೆಗಳಿಗೆ ಶಾಕ್ : ʻSSLC ಪರೀಕ್ಷೆ-1ʼರ ಪ್ರವೇಶ ಪತ್ರಕ್ಕೆ ಶಿಕ್ಷಣ ಇಲಾಖೆ ತಡೆ

ಬೆಂಗಳೂರು : 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಆಗದೇ ಇರುವ ಖಾಸಗಿ ಪ್ರೌಢ ಶಾಲೆಗಳ ಎಸ್ ಎಸ್ ಎಲ್ ಸಿ ಪರೀಕ್ಷೆ -1ರ ಕರಡು ಪ್ರವೇಶ ಪತ್ರಗಳನ್ನು ತಡೆ ಹಿಡಿದಿರುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್‌ ಏಪ್ರಿಲ್‌  ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ-1 ಕ್ಕೆ ಮಕ್ಕಳ ನೊಂದಣಿ ಮಾಡಿಕೊಂಡಿರುವ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳು ಮಾನ್ಯತೆ ನವೀಕರಣ ಆಗಿರುದೆಯೇ / ಇಲ್ಲವೇ ಎಂಬುದರ ಬಗ್ಗೆ ಮಂಡಲಿಗೆ ಮಾಹಿತಿ ನೀಡಲು ಉಲ್ಲೇಖ-1ರಲ್ಲಿ ತಿಳಿಸಲಾಗಿರುತ್ತದೆ. ಅದ್ದರಂತೆ ಉಲ್ಲೇಖ-2ರಂತೆ ಶಾಲೆಗಳ ಮಾನ್ಯತೆ ನವೀಕರಣದ ಬಗ್ಗೆ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) / ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಂಡಲಿಗೆ ಸಲ್ಲಿಕೆಯಾಗಿರುತ್ತದೆ. ಸದರಿ ಪಟ್ಟಿಯನ್ನು ಪರಿಶೀಲಿಸಲಾಗಿ ರಾಜ್ಯದ ಒಟ್ಟು 129 ಶಾಲೆಗಳು [ಪಟ್ಟಿ ಲಗತ್ತಿಸಿದೆ] ಮಾನ್ಯತೆ ನವೀಕರಣ ಆಗದೇ ಇರುವುದು ಕಂಡು ಬಂದಿರುತ್ತದೆ. ಸದರಿ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ತಡೆಹಿಡಿಯಲಾಗಿರುತ್ತದೆ.

ಒಂದು ವೇಳೆ 129 ಶಾಲೆಗಳಲ್ಲಿ ಯಾವುದಾದರೂ ಶಾಲೆಯು ಮುಂದಿನ ದಿನಗಳಲ್ಲಿ ಮಾನ್ಯತೆ ನವೀಕರಣ ಹೊಂದಿದಲ್ಲಿ (ಆ ಶಾಲೆಯ ಮಕ್ಕಳು ಈಗಾಗಲೇ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿರಬೇಕು) ಅದರ ಮಾಹಿತಿಯನ್ನು ಮಂಡಲಿಯಿಂದ ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ನಿಮ್ಮ ಮುಖಾಂತರ ಸಲ್ಲಿಕೆಯಾದಲ್ಲಿ ಆ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ಪರಿಶೀಲನೆಗೆ ಬಿಡುಗಡೆ ಮಾಡಲಾಗುವುದು. ಈ ಮಾಹಿತಿಯನ್ನು ಸಂಬಂಧಿಸಿದ ಶಾಲೆಗಳಿಗೆ ತಿಳಿಸಲು ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read