ಬೆಂಗಳೂರು : ಮಧ್ಯಾಹ್ನ ಉಪಹಾರ ಯೋಜನೆಯಡಿ ಕರ್ತವ್ಯ ನಿರ್ವಹಿಸಿ 60 ವರ್ಷಗಳ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಅಡುಗೆ ಸಿಬ್ಬಂದಿಗಳಿಗೆ ಇಡಿಗಂಟು ಸೌಲಭ್ಯ ನೀಡುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಪಿ.ಎಂ.ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸಿ ದಿನಾಂಕ 31-03-2022 ಮತ್ತು ನಂತರ ನವೆಂಬರ್-2025ರ ಅಂತ್ಯದ ವರೆಗೆ 60 ವರ್ಷಗಳ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಅಡುಗೆ ಸಿಬ್ಬಂದಿಗಳಿಗೆ ಇಡಿಗಂಟು ಸೌಲಭ್ಯವನ್ನು ಉಲ್ಲೇಖ (1) ಮತ್ತು (2) ರಲ್ಲಿ ಮಂಜೂರು ಮಾಡಿ ಆದೇಶಿಸಿರುತ್ತಾರೆ.
ಆದರೂ ಸಹ ಈವರೆಗೆ ಅಡುಗೆ ಸಿಬ್ಬಂದಿಗಳಿಗೆ ಪಾವತಿಯಾಗಿರುವ ಬಗ್ಗೆ ಈ ಕಛೇರಿ ಪೂರ್ಣವಾದ ಮಾಹಿತಿ ತಲುಪಿರುವುದಿಲ್ಲ. ಆದ್ದರಿಂದ ಈ ಪತ್ರ ತಲುಪಿದ 3 ದಿನಗಳಲ್ಲಿ ಮಾಹಿತಿಯನ್ನು ತಾಲ್ಲೂಕುವಾರು ಕೆಳಕಂಡ ನಮೂನೆಯಲ್ಲಿ ನುಡಿ 6.1 ಅಥವಾ ನುಡಿ 6 ರನಲ್ಲಿ ಭರ್ತಿ ಮಾಡಿ ಕ್ರೋಢೀಕರಿಸಿ ರಾಜ್ಯ ಕಛೇರಿಯ ಎಂ3 ಇ-ಮೇಲ್ ವಿಳಾಸಕ್ಕೆ m3mdmskarnataka@gmail.com deomdms@gmail.com ತಪ್ಪದೇ ಸಲ್ಲಿಸಲು ತಿಳಿಸಿದೆ. (ಸಾಫ್ಟ್ ಎಕ್ಸೆಲ್ ಪ್ರತಿಯನ್ನು ಸಲ್ಲಿಸುವುದು) ವಿಭಾಗದ ಹಾಗೂಸಂಬಂಧಿಸಿದ ಎಲ್ಲಾ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಸಹಾಯಕ ನಿರ್ದೇಶಕರು ಸದರಿ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ದೃಢೀಕರಿಸಿ ಸಲ್ಲಿಸುವುದು ಎಂದು ತಿಳಿಸಿದೆ.


