ನವದೆಹಲಿ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಡೆತನದ ವ್ಯವಹಾರ ಸಂಸ್ಥೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮೊದಲ ಬಂಧನವನ್ನು ಮಾಡಿದೆ.
ಬಿಸ್ವಾಲ್ ಟ್ರೇಡ್ ಲಿಂಕ್ ಪ್ರೈವೇಟ್ ಲಿಮಿಟೆಡ್(ಬಿಟಿಪಿಎಲ್) ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥಸಾರಥಿ ಬಿಸ್ವಾಲ್ ಅವರನ್ನು 2002 ರ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಭುವನೇಶ್ವರ ಮತ್ತು ಕೋಲ್ಕತ್ತಾದಲ್ಲಿರುವ ಬಿಟಿಪಿಎಲ್ ಆವರಣದಲ್ಲಿ ಇಡಿ ವ್ಯಾಪಕ ಶೋಧ ನಡೆಸಿದ ಒಂದು ದಿನದ ನಂತರ ಅವರನ್ನು ಬಂಧಿಸಲಾಗಿದೆ.
ಸೌರಶಕ್ತಿ ನಿಗಮ(ಎಸ್‌ಇಸಿಐ) ಗೆ ಸಲ್ಲಿಸಲಾದ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಆರೋಪದ ಮೇಲೆ ಬಿಟಿಪಿಎಲ್, ಅದರ ನಿರ್ದೇಶಕರು ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ಸಲ್ಲಿಸಿದ ಎಫ್‌ಐಆರ್ ಆಧರಿಸಿ ಪಾರ್ಥಸಾರಥಿ ಅವರನ್ನು ಬಂಧಿಸಲಾಗಿದೆ.