ಅತಿಯಾಗಿ ಆಲೂಗಡ್ಡೆ ತಿನ್ನುವುದರಿಂದ ಆಗಬಹುದು ಇಂಥಾ ಅಪಾಯ….!

ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದ್ರೆ ಅಪಾಯ ಗ್ಯಾರಂಟಿ. ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಬೊಜ್ಜಿನ ಸಮಸ್ಯೆ ಬರಬಹುದು, ಮಧುಮೇಹಕ್ಕೂ ಇದು ಕಾರಣವಾಗಬಹುದು.

ಆಲೂಗಡ್ಡೆಯನ್ನು ಅತಿಯಾಗಿ ತಿಂದರೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಸಹ ಹೆಚ್ಚಿಸುತ್ತದೆ. ಹಾಗಾಗಿ ಸಂಧಿವಾತದ ಸಮಸ್ಯೆ ಇರುವ ರೋಗಿಗಳು ಹೆಚ್ಚು ಆಲೂಗಡ್ಡೆ ಸೇವಿಸಬಾರದು.

ಆಲೂಗಡ್ಡೆಯ ಅತಿಯಾದ ಸೇವನೆಯು ಮಧುಮೇಹಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಆಲೂಗಡ್ಡೆಯಿಂದ ದೂರವಿದ್ದರೆ ಒಳ್ಳೆಯದು. ಆಲೂಗಡ್ಡೆಯ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಹಾಗಾಗಿ ಅತಿಯಾದ ಆಲೂಗಡ್ಡೆ ತಿನ್ನುವುದು ಬಿಪಿ ರೋಗಿಗಳಿಗೂ ಸೂಕ್ತವಲ್ಲ. ಆಲೂಗಡ್ಡೆಗಳಲ್ಲಿ ಕಾರ್ಬೋಹೈಡ್ರೇಟ್‌ ಅಧಿಕವಾಗಿರುತ್ತದೆ. ಇದನ್ನು ಹೆಚ್ಹೆಚ್ಚು ತಿಂದರೆ ಕ್ಯಾಲೋರಿ ಕೂಡ ಹೆಚ್ಚಾಗುತ್ತದೆ. ಪರಿಣಾಮ ತೂಕ ಹೆಚ್ಚಾಗುವ ಅಪಾಯವೂ ಇರುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಹಿತಮಿತವಾಗಿ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read