ಹಲವು ಕಾಯಿಲೆಗಳನ್ನು ದೂರ ಮಾಡುತ್ತೆ ಬೇಸಿಗೆಯಲ್ಲಿ ಈ ಬೇಳೆಕಾಳುಗಳ ಸೇವನೆ

ಬೇಳೆಕಾಳುಗಳು ನಿಮ್ಮ ದೇಹಕ್ಕೆ ಬಹಳ ಮುಖ್ಯ. ಇವುಗಳಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತದೆ. ಧಾನ್ಯಗಳ ಸೇವನೆಯಿಂದ ಹಲವಾರು ರೀತಿಯ ಕಾಯಿಲೆಗಳು ಕೂಡ ನಿಮ್ಮಿಂದ ದೂರ ಉಳಿಯುತ್ತವೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದಯದ ತೊಂದರೆ ಇರುವವರು ನಿತ್ಯವೂ ಬೇಳೆಕಾಳುಗಳನ್ನು ಸೇವಿಸಬೇಕು. ಇವುಗಳಲ್ಲಿ ಕೆಲವೊಂದು ಬೇಸಿಗೆಗೆ ಅತ್ಯಂತ ಸೂಕ್ತವಾಗಿವೆ, ಅವು ಯಾವುದು ಅನ್ನೋದನ್ನು ನೋಡೋಣ.

ಹೆಸರು ಬೇಳೆ : ಬೇಸಿಗೆಯಲ್ಲಿ ಹೆಸರು ಬೇಳೆ ಸೇವಿಸುವುದರಿಂದ ಹೊಟ್ಟೆ ಉರಿಯಿಂದ ಮುಕ್ತಿ ಸಿಗುತ್ತದೆ. ಇದು ದೇಹಕ್ಕೆ ತಂಪು ನೀಡುತ್ತದೆ. ಇದರಲ್ಲಿ ಫೈಬರ್‌, ಪ್ರೋಟೀನ್‌, ಕ್ಯಾಲ್ಷಿಯಂ ಮತ್ತು ಖನಿಜದ ಅಂಶಗಳಿವೆ. ಬೇಸಿಗೆಯಲ್ಲಿ ಹೆಸರು ಬೇಳೆಯ ತೊವೆ ಅಥವಾ ದಾಲ್‌ ಮಾಡಿ ನೀವು ಸೇವಿಸಬಹುದು. ಇತರ ತಿನಿಸುಗಳಿಗೂ ಇದನ್ನು ಬಳಕೆ ಮಾಡಬಹುದು.

ಉದ್ದಿನಬೇಳೆ : ಉದ್ದಿನ ಬೇಳೆಯನ್ನು ಕೂಡ ಬೇಸಿಗೆಯಲ್ಲಿ ಸೇವನೆ ಮಾಡಬಹುದು. ಉದ್ದಿನ ಬೇಳೆಯ ತಿನಿಸುಗಳನ್ನು ತಿಂದರೆ ಜ್ವರ ವಾಸಿಯಾಗುತ್ತದೆ. ಇದು ಪುರುಷರಿಗೆ ತುಂಬಾನೇ ಪ್ರಯೋಜನಕಾರಿ. ಬೇರೆ ಬೇರೆ ಕಾಯಿಲೆಗಳಿದ್ದರೆ ಉದ್ದಿನ ಬೇಳೆಯ ತಿನಿಸುಗಳನ್ನು ಸವಿಯುವ ಮುನ್ನ ಒಮ್ಮೆ ವೈದ್ಯರ ಸಲಹೆ ಪಡೆಯಿರಿ.

ಕಡಲೆಬೇಳೆ : ಕಡಲೆ ಬೇಳೆ ಕೂಡ ಬೇಸಿಗೆಗೆ ಹೇಳಿ ಮಾಡಿಸಿದಂತಹ ಧಾನ್ಯ. ಇದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಇದು ರಾಮಬಾಣ. ಜೊತೆಗೆ ದೇಹಕ್ಕೆ ಶಕ್ತಿಯೂ ಸಿಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲ ಇರುವುದರಿಂದ ಬೇಸಿಗೆಯಲ್ಲಿ ನೀವು ನಿರಾತಂಕವಾಗಿ ಕಡಲೆ ಬೇಳೆಯ ಮೇಲೋಗರಗಳನ್ನು ಮಾಡಿ ತಿನ್ನಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read