‘ಬಾಹುಬಲಿ’ ಸಮೋಸ ತಿಂದವರಿಗೆ ಬರೋಬ್ಬರಿ 71,000 ರೂ. ಬಹುಮಾನ….!

ಆಹಾರ ತಿನ್ನುವ ಸ್ಪರ್ಧೆ ಏರ್ಪಡಿಸುವುದು ಹೊಸದೇನು ಅಲ್ಲ. ಈಗಾಗಲೇ ಇಂತಹ ಹಲವು ಸ್ಪರ್ಧೆಗಳು ನಡೆದಿದ್ದು, ಇದೀಗ ಆಹಾರಪ್ರಿಯರಿಗೆ ಮತ್ತೊಂದು ಸವಾಲು ಎದುರಾಗಿದೆ. ಉತ್ತರ ಪ್ರದೇಶದ ಸಿಹಿ ತಿಂಡಿ ಅಂಗಡಿ ಮಾಲೀಕರೊಬ್ಬರು ಈ ಸವಾಲನ್ನು ಹಾಕಿದ್ದಾರೆ.

ಮೀರತ್ ನ ಲಾಲ್ ಕುರ್ತಿ ಮೂಲದ ಕೌಶಲ್ ಸ್ವೀಟ್ಸ್ ಮಾಲೀಕ ಶುಭಂ ಕೌಶಲ್ ಈಗ ‘ಬಾಹುಬಲಿ’ ಸಮೋಸವನ್ನು ತಿನ್ನುವ ಸವಾಲು ಒಡ್ಡಿದ್ದು, 12 ಕೆಜಿ ತೂಕ ಹೊಂದಿರುವ ಈ ಸಮೋಸವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದವರಿಗೆ 71,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಾಹುಬಲಿ ಸಮೋಸವನ್ನು ಮೂರು ಮಂದಿ ತಯಾರಿಸುತ್ತಿದ್ದು, ಇದಕ್ಕಾಗಿ 6 ಗಂಟೆ ಸಮಯ ಬೇಕಾಗುತ್ತದೆ. ಎಣ್ಣೆಯಲ್ಲಿ ಕರೆಯೋದಕ್ಕೆ ಸುಮಾರು 90 ನಿಮಿಷ ತೆಗೆದುಕೊಳ್ಳುತ್ತದೆ ಎನ್ನಲಾಗಿದ್ದು, ಈ ಬಾಹುಬಲಿ ಸಮೋಸ ತಿನ್ನುವ ಸವಾಲು ಸ್ವೀಕರಿಸಿ ಗೆಲವು ಸಾಧಿಸಿದವರಿಗೆ 71,000 ರೂಪಾಯಿ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read