ಋತು ಬದಲಾವಣೆಯಿಂದಾಗುವ ‘ಅಲರ್ಜಿ’ ಸಮಸ್ಯೆ ನಿವಾರಣೆಗೆ ಸೇವಿಸಿ ಈ ಆಹಾರ

ಋತುವು ಬದಲಾದಂತೆ ಕೆಲವರು ಅಲರ್ಜಿ ಸಮಸ್ಯೆಯಿಂದ ಬಳಲುತ್ತಾರೆ. ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಮುಂತಾದ ಅಲರ್ಜಿ ಸಮಸ್ಯೆಗೆ ಒಳಗಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಇಂತಹ ಅಲರ್ಜಿ ಸಮಸ್ಯೆಗಳನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಿ.

*ಅನಾನಸ್ : ಇದರಲ್ಲಿ ಅಲರ್ಜಿ ವಿರುದ್ಧ ಹೋರಾಡುವ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಬ್ರೊಮೆಲೈನ್ ಅಂಶವನ್ನು ಹೊಂದಿದ್ದು, ಇದು ಕಣ್ಣು್ಗಳು ಮತ್ತು ಸ್ರವಿಸುವ ಮೂಗಿಗೆ ಕಾರಣವಾಗುವಂತಹ ಕಿರಿಕಿರಿ ಮತ್ತು ಊತವನ್ನು ಶಾಂತಗೊಳಿಸುತ್ತದೆ.

*ಸೇಬು : ಇದರಲ್ಲಿರುವ ಪೋಷಕಾಂಶಗಳು ಗಾಳಿಯಲ್ಲಿರುವ ಅಲರ್ಜಿ ಅಂಶಗಳಿಗೆ ಪ್ರತಿಕ್ರಿಯಿಸುವ ಕೋಶಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

*ಕ್ಯಾಪ್ಸಿಕಂ : ಇವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಅಲರ್ಜಿಯನ್ನು ದೂರವಿಡಬಹುದು.

* ಮೀನು : ಮೀನುಗಳಲ್ಲಿ ಒಮೆಗಾ3 ಕೊಬ್ಬಿನಾಮ್ಲಗಳು ಇರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಗಂಟಲು ಮತ್ತು ಮೂಗುಗಳಲ್ಲಿ ಊತವನ್ನು ತಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read