ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ತಪ್ಪದೇ ಸೇವಿಸಿ…!

ಮೆದುಳು ನಮ್ಮ ದೇಹದ ಪ್ರಮುಖ ಅಂಗ. ಇದು ನಮಗೆ ಯೋಚಿಸುವ, ಅರ್ಥ ಮಾಡಿಕೊಳ್ಳುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ ಮೆದುಳು ದೇಹದ ಇತರ ಭಾಗಗಳನ್ನೂ ನಿಯಂತ್ರಿಸುತ್ತದೆ. ಹೃದಯ ಬಡಿತ, ಜೀರ್ಣಕ್ರಿಯೆ, ಕೈ ಮತ್ತು ಕಾಲುಗಳ ಚಲನೆ ಇವೆಲ್ಲವೂ ಮೆದುಳಿನ ಸೂಚನೆಗಳ ಮೇಲೆ ನಡೆಯುತ್ತವೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಮ್ಮ ಇಡೀ ದೇಹವು ಸ್ಥಗಿತಗೊಳ್ಳುತ್ತದೆ. ಆದ್ದರಿಂದ ನಮ್ಮ ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಮೆದುಳು ಆರೋಗ್ಯಕರವಾಗಿರಲು ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ಸೇವಿಸಬೇಕು.

ಮೊಟ್ಟೆ ಮೊಟ್ಟೆಯಲ್ಲಿ ಕೋಲಿನ್ ಎಂಬ ಪೋಷಕಾಂಶವಿದೆ. ಇದು ಮೆದುಳಿನ ಜೀವಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ನರಪ್ರೇಕ್ಷಕವಾಗಿ  ಕೆಲಸ ಮಾಡುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿವೆ. ಇದು ಮೆದುಳಿಗೆ ಶಕ್ತಿಯನ್ನು ನೀಡುತ್ತದೆ. ಮೊಟ್ಟೆಯಲ್ಲಿರುವ ಕಬ್ಬಿಣ, ಸತು, ಸೆಲೆನಿಯಮ್, ಅಯೋಡಿನ್ ಮತ್ತು ವಿಟಮಿನ್ ಬಿ 12, ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಮೊಟ್ಟೆಗಳನ್ನು ತಿನ್ನುವುದರಿಂದ ಏಕಾಗ್ರತೆ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ಬಾದಾಮಿ ಮತ್ತು ವಾಲ್ನಟ್ಸ್‌ – ವಿಟಮಿನ್ ಇ, ಒಮೆಗಾ 3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್‌ಗಳು ಬಾದಾಮಿಯಲ್ಲಿ ಕಂಡುಬರುತ್ತವೆ. ಇವೆಲ್ಲವೂ ಒಟ್ಟಾಗಿ ಮೆದುಳಿನ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ, ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುತ್ತವೆ. ಮೆದುಳಿಗೆ ಶಕ್ತಿಯನ್ನು ನೀಡುತ್ತವೆ. ವಾಲ್‌ನಟ್ಸ್‌ನಲ್ಲಿ ವಿಟಮಿನ್ ಇ, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಮೆದುಳಿಗೆ ಪ್ರಯೋಜನಕಾರಿಯಾದ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಎರಡೂ ಡ್ರೈಫ್ರೂಟ್‌ಗಳನ್ನು ಸೇವನೆ ಮಾಡುವುದು ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ತಾಜಾ ಹಣ್ಣು ಮತ್ತು ತರಕಾರಿಬೆರಿಹಣ್ಣುಗಳು, ಸ್ಟ್ರಾಬೆರಿ, ಬ್ರೊಕೊಲಿ, ಕ್ಯಾರೆಟ್‌ಗಳಂತಹ ತರಕಾರಿಗಳು ಮೆದುಳಿನ ಕೋಶಗಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದಲ್ಲದೆ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿಗೆ ತುಂಬಾ ಪ್ರಯೋಜನಕಾರಿ. ಅವು ಆಲೋಚನಾ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ತರಕಾರಿಗಳಲ್ಲಿ ಕಂಡುಬರುವ ನಾರುಗಳು ಮೆದುಳಿಗೆ ಒಳ್ಳೆಯದು. ಮೆದುಳಿಗೆ ಪ್ರಯೋಜನಕಾರಿಯಾದ ಫೋಲೇಟ್, ಕಬ್ಬಿಣ, ಸತು ಮತ್ತು ವಿಟಮಿನ್ ಕೆನಂತಹ ಖನಿಜಗಳು ಈ ಹಣ್ಣು-ತರಕಾರಿಗಳಲ್ಲಿವೆ.

ಹಾಲು ಮತ್ತು ಹಾಲಿನ ಉತ್ಪನ್ನಗಳುಹಾಲಿನಲ್ಲಿ ಮೆದುಳಿನ ಕೋಶಗಳ ಬೆಳವಣಿಗೆ ಮತ್ತು ಕಾರ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿಯಂತಹ ಪೋಷಕಾಂಶಗಳಿವೆ. ಇದು ಮೆದುಳಿಗೆ ಶಕ್ತಿಯನ್ನು ನೀಡುವ ಮತ್ತು ನ್ಯೂರಾನ್‌ಗಳ ಸಂವಹನವನ್ನು ಸುಧಾರಿಸುವ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಒಳಗೊಂಡಿದೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿದ್ದು ಇದು ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read