ಈ ಹಣ್ಣುಗಳನ್ನು ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು ತಿಂದ್ರೆ ನೀವು ಮಹಾಮಾರಿ ಕ್ಯಾನ್ಸರ್ ನಿಂದ ದೂರವಿರಬಹುದು.

ಸೇಬು : ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋ ಮಾತೇ ಇದೆ. ಸೇಬಿನಲ್ಲಿ ಫೈಬರ್, ಪೊಟಾಶಿಯಂ, ವಿಟಮಿನ್ ಸಿ ಇದೆ. ಕ್ಯಾನ್ಸರ್ ಸೆಲ್ಸ್ ವಿರುದ್ಧ ಹೋರಾಡುವ ನಿಮ್ಮ ಇಮ್ಯೂನ್ ವ್ಯವಸ್ಥೆಯನ್ನು ಸೇಬು ಗಟ್ಟಿಗೊಳಿಸುತ್ತದೆ.

ನಿಂಬೆ : ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ನಿಂಬೆ ಹಣ್ಣು ಬೆಸ್ಟ್. ಇದರಲ್ಲಿ ವಿಟಮಿನ್ ಸಿ ಸೇರಿದಂತೆ ಹಲವು ವಿಟಮಿನ್ ಗಳು ಹಾಗೂ ಮಿನರಲ್ ಗಳಿವೆ. ಇದು ಉದ್ವೇಗ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮರಸೇಬು (Pears) : ಇದರಲ್ಲಿ ಕಾಪರ್, ವಿಟಮಿನ್ ಕೆ ಸೇರಿದಂತೆ ಹಲವು ಪೋಷಕಾಂಶಗಳಿವೆ. ಕ್ಯಾನ್ಸರ್ ಅನ್ನು ದೂರ ಓಡಿಸಬಲ್ಲ ಆಂಥೋಸಯಾನಿನ್‌ಗಳು ಸಹ ಇವೆ.

ಬಾಳೆಹಣ್ಣು : ಇದು ಕ್ಯಾನ್ಸರ್ ರೋಗಿಗಳಲ್ಲಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಬಾಳೆಹಣ್ಣನ್ನು ತಿನ್ನುವುದು ಸಹ ಸುಲಭ. ವಾಂತಿಯ ಮೂಲಕ ದೇಹದಿಂದ ಹೊರಹೋದ ಎಲೆಕ್ಟ್ರೋಲೈಟ್ಸ್ ಅನ್ನು ಬಾಳೆಹಣ್ಣು ಪೂರೈಸುತ್ತದೆ.

ಬ್ಲೂಬೆರ್ರಿ : ಕ್ಯಾನ್ಸರ್ ನಿಂದ ರೋಗಿಗಳು ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ. ಬ್ಲೂಬೆರಿ ಹಣ್ಣು ಕಿಮೋ ಮೆದುಳನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಟಿ ಒಕ್ಸಿಡೆಂಟ್ಸ್, ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್ ಅಂಶವಿರುವುದರಿಂದ ಕ್ಯಾನ್ಸರ್ ಅನ್ನು ತಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read