ʼಒಣ ದ್ರಾಕ್ಷಿʼ ಸೇವಿಸಿ…. ದೇಹ ತೂಕ ಇಳಿಸಿ….!

ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..?

ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಒಣ ದ್ರಾಕ್ಷಿಯಲ್ಲಿ ವಿಟಮಿನ್ ಮತ್ತು ಖನಿಜಾಂಶವಿದ್ದು, ಇದು ದೇಹದ ಅಂಗಾಂಶ ಮತ್ತು ಮಾಂಸ ಖಂಡಗಳಿಗೆ ಶಕ್ತಿ ಒದಗಿಸುತ್ತದೆ.

ದೇಹದಲ್ಲಿ ಜೀರ್ಣ ಕ್ರಿಯೆ ನಿಧಾನವಾದಾಗ ಕೊಬ್ಬು ಬೆಳೆಯುತ್ತದೆ. ಜೀರ್ಣವಾಗದೆ ಉಳಿದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗುವ ಬದಲು ಕೊಬ್ಬು ಆಗುತ್ತದೆ.

ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಕೊಬ್ಬು ಶೇಖರಗೊಳ್ಳುವ ಸಾಧ್ಯತೆ ಕಡಿಮೆ. ಒಣದ್ರಾಕ್ಷಿ ಹೃದಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರಿಗೆ ಕೂಡ ಇದು ಸಹಾಯಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read