ʼಏಲಕ್ಕಿʼ ತಿನ್ನಿ ಬೊಜ್ಜು ಕರಗಿಸಿ…!

ಅಡುಗೆಮನೆಯ ಮಸಾಲೆ ಪದಾರ್ಥವಾದ ಏಲಕ್ಕಿ ಸುವಾಸನೆಗಷ್ಟೇ ಸೀಮಿತವಲ್ಲ. ಇದು ಔಷಧಿಯಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ, ತೂಕ ಇಳಿಸಿಕೊಳ್ಳುವವರಿಗೆ ಇದು ದಿವ್ಯ ಔಷಧಿ.

ಅದಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು ನಿಯಂತ್ರಿಸುತ್ತದೆ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಕರುಳಿನ ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ.

ಹೊಟ್ಟೆಯ ಭಾಗದಲ್ಲಿ ಬೊಜ್ಜಿನ ಸಮಸ್ಯೆ ಇದ್ದವರು ಇದನ್ನು ಸೇವಿಸುವುದರಿಂದ ಬೊಜ್ಜು ಕರಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಎರಡು ಏಲಕ್ಕಿಯನ್ನು ಸಿಪ್ಪೆ ಸಮೇತ ತಿಂದು ತಕ್ಷಣ ಬಿಸಿ ನೀರು ಕುಡಿಯಿರಿ.

ಅರ್ಧಗಂಟೆ ಬಿಟ್ಟು ಆಹಾರವನ್ನು ಸೇವಿಸಿ ಈ ರೀತಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಊಟದ ನಂತರ ಮಾಡುವುದರಿಂದ 30 ದಿನದ ಒಳಗೆ ದೇಹ ತೂಕದಲ್ಲಿ ಸುಧಾರಣೆಯಾಗುವುದು.

ಮೆಡಿಕಲ್ ಗಳಲ್ಲಿ ದೊರೆಯುವ ತೂಕ ಇಳಿಕೆಯ ಮಾತ್ರೆ ಸೇವಿಸುವ ಬದಲು ಇದನ್ನು ಪ್ರಯತ್ನಿಸಿ ಪರಿಣಾಮ ನೋಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read