ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿ ʼಆರೋಗ್ಯʼ ವೃದ್ಧಿಸಿ

ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ವೃದ್ಧಿಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಸಾಕಷ್ಟು ಲಾಭಗಳಿವೆ.

ತಜ್ಞರ ಪ್ರಕಾರ ಜೇನು ತುಪ್ಪದಲ್ಲಿ ಕೊಬ್ಬು, ಸೋಡಿಯಂ ಇರುವುದಿಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಜೇನುತುಪ್ಪ ಸೇವನೆ ಮಾಡಿದ್ರೆ ಈ ಋತುವಿನಲ್ಲಿ ಬರುವ ನೆಗಡಿ, ಕೆಮ್ಮು, ಜ್ವರದಂತಹ ರೋಗಗಳ ವಿರುದ್ಧ ನಮ್ಮ ದೇಹ ಹೋರಾಡಲು ಸಹಾಯವಾಗುತ್ತದೆ.

ಜೇನುತುಪ್ಪದಲ್ಲಿ ಕ್ಯಾಲ್ಸಿಯಂ, ಐರನ್, ಕ್ಲೋರಿನ್, ಗ್ಲುಕೋಸ್, ಪೋಟ್ಯಾಶಿಯಂ ಸೇರಿದಂತೆ ವಿಟಮಿನ್ ವಿ1, ವಿಟಮಿನ್ 6 ಇರುತ್ತದೆ. ಇವು ದೇಹ ಬ್ಯಾಕ್ಟೀರಿಯಾ ವಿರುದ್ದ ಹೋರಾಡಲು ನೆರವಾಗುತ್ತವೆ. ಜೊತೆಗೆ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಕೆಲಸವನ್ನು ಜೇನುತುಪ್ಪ ಮಾಡುತ್ತದೆ.

ಜೇನುತುಪ್ಪದಲ್ಲಿ ಗ್ಲುಕೋಸ್ ಇರುವ ಕಾರಣ ದೇಹದಲ್ಲಿ ಇಡೀ ದಿನ ಶಕ್ತಿ ತುಂಬಿರಲು ಸಹಾಯವಾಗುತ್ತದೆ. ವ್ಯಾಯಾಮಕ್ಕಿಂತ ಮೊದಲು ½ ಚಮಚ ಜೇನುತುಪ್ಪ ಸೇವನೆ ಮಾಡಿದ್ರೆ ಸುಸ್ತಾಗುವುದಿಲ್ಲ. ಟೀ ಹಾಗೂ ಕಾಫಿಗೆ ಸಕ್ಕರೆ ಬದಲು ಜೇನುತುಪ್ಪವನ್ನು ಬಳಸಬಹುದು.

ಪ್ರತಿದಿನ ಬೆಳಿಗ್ಗೆ ಒಂದು ಚಮಚ ಜೇನುತುಪ್ಪವನ್ನು ಬಿಸಿ ನೀರಿಗೆ ಹಾಕಿ ಸೇವನೆ ಮಾಡಿದ್ರೆ ಸಾಕಷ್ಟು ಲಾಭವಿದೆ. ರಕ್ತದೊತ್ತಡ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಉತ್ತಮ ನಿದ್ರೆಗೆ ಇದು ಸಹಕಾರಿ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರಿಗೆ ಇದು ಬೆಸ್ಟ್.

ಚಳಿಗಾಲದಲ್ಲಿ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದು ಚರ್ಮ ಶುಷ್ಕವಾಗಲು ಬಿಡುವುದಿಲ್ಲ.

ಹೊಳೆಯುವ ಚರ್ಮಕ್ಕೂ ಜೇನು ಒಳ್ಳೆಯದು. ಜೇನುತುಪ್ಪ, ಹಾಲು ಮತ್ತು ಪಪ್ಪಾಯಿ ಹಾಗೆ ಹಾಲಿನ ಪೌಡರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ಮೇಲೆ ಮುಖ ತೊಳೆಯಿರಿ. ಪ್ರತಿ ದಿನ ಈ ವಿಧಾನ ಅನುಸರಿಸುತ್ತ ಬಂದ್ರೆ ಮುಖ ಹೊಳಪು ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read