ಸುಲಭವಾಗಿ ಮಾಡಿ ‘ರವಾ ಮಿಕ್ಸ್’

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬೇಗ, ಬೇಗನೆ ಆಗುವ ಅಡುಗೆ, ತಿಂಡಿ ಇದ್ದರೆ ತುಂಬಾ ಸಹಾಯಕವಾಗುತ್ತದೆ. ಅಂತಹವರಿಗೆ ಈ ಇನ್ಸಟೆಂಟ್ ರವಾ ಮಿಕ್ಸ್ ಬಹಳ ಸಹಾಯಕವಾಗುತ್ತದೆ. ಇದನ್ನು ಬಳಸಿ ಉಪ್ಪಿಟ್ಟು, ಇಡ್ಲಿ ಮಾಡಿಕೊಂಡು ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

ರವೆ-2 ಕಪ್, ಹಸಿಮೆಣಸು – 2 (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಶುಂಠಿ – 1 ಇಂಚು (ಕತ್ತರಿಸಿಕೊಳ್ಳಿ), ಗೋಡಂಬಿ – 5, ಕರಿಬೇವು – ಸ್ವಲ್ಪ, ಕಡಲೆಬೇಳೆ – 1 ಟೀ ಸ್ಪೂನ್, ಉದ್ದಿನಬೇಳೆ – 1 ಟೀ ಸ್ಪೂನ್, ಎಣ್ಣೆ – 1 ಟೇಬಲ್ ಸ್ಪೂನ್, ಚಿಟಿಕೆ – ಇಂಗು, ಉಪ್ಪು – 1 ಟೇಬಲ್ ಸ್ಪೂನ್.

ಮಾಡುವ ವಿಧಾನ:

ಒಂದು ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದನ್ನು ಗ್ಯಾಸ್ ಮೇಲೆ ಇಟ್ಟು 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಅದಕ್ಕೆ 1 ಟೀ ಸ್ಪೂನ್ ಸಾಸಿವೆ ಹಾಕಿ ಅದು ಸಿಡಿದಾಗ ಅದಕ್ಕೆ ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು, ಚಿಟಿಕೆ ಇಂಗು, ಹಸಿಮೆಣಸು, ಶುಂಠಿ ಹಾಕಿ ತುಸು ಫ್ರೈ ಮಾಡಿ. ನಂತರ ಇದಕ್ಕೆ ಗೋಡಂಬಿ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ.

ನಂತರ ಇದಕ್ಕೆ ರವೆ ಹಾಕಿ ಪರಿಮಳ ಬರುವವರಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ಇದು ತಣ್ಣಗಾದ ನಂತರ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ತುಂಬಿಸಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read