ನವದೆಹಲಿ: ಭಾನುವಾರ ಮುಂಜಾನೆ ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಬಿಕಾನೆರ್ ನಲ್ಲಿ ಮುಂಜಾನೆ 2:16 ಕ್ಕೆ ಭೂಕಂಪನ ಉಂಟಾಗಿದೆ. ಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(NCS) ತಿಳಿಸಿದೆ.
ಎನ್‌ಸಿಎಸ್ ಪ್ರಕಾರ, ಭೂಕಂಪದ ಕೇಂದ್ರಬಿಂದು ಬಿಕಾನೇರ್‌ನ ಪಶ್ಚಿಮಕ್ಕೆ 516 ಕಿಮೀ ದೂರದಲ್ಲಿದೆ ಮತ್ತು ಇದು 8 ಕಿಮೀ ಆಳದಲ್ಲಿ ಅಪ್ಪಳಿಸಿತು. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.
ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
Earthquake of Magnitude:4.2, Occurred on 26-03-2023, 02:16:37 IST, Lat: 28.40 & Long: 68.06, Depth: 8 Km ,Location: 516km W of Bikaner, Rajasthan, India for more information Download the BhooKamp App https://t.co/X8RL8NbzD6@Dr_Mishra1966 @Ravi_MoES @ndmaindia @Indiametdept pic.twitter.com/NEB8MLUnal
— National Center for Seismology (@NCS_Earthquake) March 25, 2023
Earthquake of Magnitude:3.5, Occurred on 26-03-2023, 01:45:09 IST, Lat: 27.48 & Long: 96.15, Depth: 76 Km ,Location: Changlang, Arunachal Pradesh, India for more information Download the BhooKamp App https://t.co/nv12Hun16R@Dr_Mishra1966 @Ravi_MoES @ndmaindia @Indiametdept pic.twitter.com/nMa6y2y2tn
— National Center for Seismology (@NCS_Earthquake) March 25, 2023