ಕರ್ನಾಟಕ ಸರ್ಕಾರದ ಯೋಜನೆಯಂತೆ ತಾಲ್ಲೂಕು ವ್ಯಾಪ್ತಿಯಲ್ಲಿನ ಇ-ಪೌತಿ ಖಾತೆ ಬದಲಾವಣೆ ಸಂಬಂಧ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಪೌತಿ ವಾರಸುದಾರಿಕೆಯ ಖಾತೆಗೆ ಖಾತೆದಾರನ ಮರಣ ಧೃಢೀಕರಣ ಪತ್ರ, ಒಂದು ವೇಳೆ ಮರಣ ಧೃಡೀಕರಣ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳಂತೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಡ್‍ನ್ನು ಪಡೆದುಕೊಳ್ಳುವುದು.
ಆರ್.ಡಿ.ಸಂಖ್ಯೆಯುಳ್ಳ ವಂಶವೃಕ್ಷ ಧೃಡೀಕರಣ ಪತ್ರ, ಚಾಲ್ತಿ ಸಾಲಿನ ಪಹಣೆ, ಆಧಾರ್ ಪತ್ರಿ ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು. ದಾಖಾಲಾತಿಗಳೊಂದಿಗೆ(ಪಟ್ಟೆದಾರರು ಮರಣಹೊಂದಿದರೆ ಪಟ್ಟೆದಾರರ ನೇರ ವಾರಸುದಾರರಲ್ಲದೇ ಇತರೇ ಸಂಬಂಧಗಳಿಗೆ ನೇರ ಖಾತೆ ಮಾಡುವ ಪ್ರಕ್ರಿಯೆ ಹೊರತುಪಡಿಸಿ) ಮನವಿಯನ್ನು/ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕರಿಗಳಿಗೆ ಸಲ್ಲಿಸಬೇಕು ಎಂದು ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಶ್ರೀಧರ ಅವರು ತಿಳಿಸಿದ್ದಾರೆ.
