ಬೆಂಗಳೂರಿನ ‘ಮಾಣೆಕ್ ಷಾ ಪರೇಡ್’ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ವೀಕ್ಷಿಸಲು ಸಾರ್ವಜನಿಕರಿಗೆ ‘E-Pass’.! ಜಸ್ಟ್ ಹೀಗೆ ಪಡೆಯಿರಿ.!

ಬೆಂಗಳೂರು : ಬೆಂಗಳೂರು ನಗರದಲ್ಲಿ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಗಸ್ಟ್ 15 ರಂದು ನಡೆಯಲಿರುವ ರಾಜ್ಯ ಮಟ್ಟದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ ಪ್ರಥಮ ಬಾರಿಗೆ E-Pass ವ್ಯವಸ್ಥೆ ಕಲ್ಪಿಸಿದ್ದು, ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in) ನಲ್ಲಿ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ E-Pass ಅನ್ನು download ಮಾಡಿಕೊಳ್ಳಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ ರವರು ತಿಳಿಸಿದ್ದಾರೆ.

*ವಿಶೇಷ ಸೂಚನೆ ಇ-ಪಾಸ್ ಕೇವಲ ಆಗಸ್ಟ್ 15 ರಂದು ಮಾತ್ರ ಮಾನ್ಯವಾಗಿರುತ್ತದೆ. ಇ-ಪಾಸ್ ನೊಂದಿಗೆ ಮೂಲ ಗುರುತಿನ ಚೀಟಿ (Original ID card) ಕಡ್ಡಾಯವಾಗಿ ಹೊಂದಿರಬೇಕು. ಇ-ಪಾಸ್ ಹೊಂದಿರುವವರು ಬೆಳಿಗ್ಗೆ 08.15 ರೊಳಗೆ ಗೇಟ್ ನಂ 4 ರಿಂದ ಮಾತ್ರ ಮೈದಾನವನ್ನು ಪ್ರವೇಶಿಸಬೇಕು. ನಿಗದಿತ ಸಮಯದ ನಂತರ ಇ-ಪಾಸ್ ಅಮಾನ್ಯವಾಗಲಿದ್ದು, ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಇ-ಪಾಸ್ ಅನ್ನು ವರ್ಗಯಿಸುವಂತಿಲ್ಲ. ಒಂದು ಇ-ಪಾಸ್ ಗೆ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಕಾರ್ಯಕ್ರಮದ ಸಮಯದಲ್ಲಿ ಇ-ಪಾಸ್ ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಅವಶ್ಯವಿರುವುದಿಲ್ಲ. ಇ-ಪಾಸ್ ಗಳು ಒಟ್ಟು 3000 ಸಂಖ್ಯೆಗೆ ಸೀಮಿತವಾಗಿರುವುದರಿಂದ “ಮೊದಲು ಬಂದವರಿಗೆ ಮೊದಲ” ಆದ್ಯತೆ ನೀಡಲಾಗುವುದು ಇ-ಪಾಸ್ ಹೊಂದಿರುವವರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪಾರ್ಕಿಂಗ್ ವ್ಯವಸ್ಥೆ ಗೆ ಪೊಲೀಸ್ ಇಲಾಖೆ ನಿರ್ದೇಶನದಂತೆ ಸಾರ್ವಜನಿಕರು ತಮ್ಮ ವಾಹನ ನಿಲುಗಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read