ಸೆ.1ರೊಳಗೆ ಎಲ್ಲ ಎಸಿ, ತಹಸೀಲ್ದಾರ್ ಕಚೇರಿಗಳಲ್ಲೂ `ಇ-ಆಫೀಸ್’ ಜಾರಿ : ಸಚಿವ ಕೃಷ್ಣಬೈರೇಗೌಡ ಮಾಹಿತಿ

ಬೀದರ್ : ರಾಜ್ಯಾದ್ಯಂತ ಸೆಪ್ಟೆಂಬರ್  1 ರೊಳಗೆ ಎಲ್ಲಾ ಎಸಿ ಉಪವಿಭಾಗಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲೂ ಆನ್ ಲೈನ್ ಮೂಲಕವೇ ಕಡತಗಳ ವಿಲೇವಾರಿ ಮಾಡಲು ಇ-ಆಫೀಸ್ ಜಾರಿ ಮಾಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಕಂದಾಯ ಇಲಾಖೆಗಳ ದಾಖಲೆಗಳನ್ನು ಸಂಗ್ರಹಿಸಿಡುವ ರೆಕಾರ್ಡ್ಸ್ ರೂಂಗಳ ನಿರ್ವಹಣೆ ಸೂಕ್ತವಾಗಿ ಮಾಡಿಲ್ಲ. 50 ರಿಂದ 70 ವರ್ಷಗಳ ಹಳೆಯ ದಾಖಲೆಗಳು ಹಾಳಾಗುವ ಆತಂಕವಿದ್ದು, ಹೀಗಾಗಿ ಎಲ್ಲ ಹಳೆಯ ದಾಖಲೆಗಳನ್ನು ಡಿಜಿಟಲೈಜೇಶನ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜನಸಾಮಾನ್ಯರ ತಕರಾರು ಅರ್ಜಿಗಳನ್ನು ಕಳೆದ 2 ತಿಂಗಳಿನಿಂದ ಕಾಲಮಿತಿಯೊಳಗೆ ತ್ವರಿತ ವಿಲೇವಾರಿ ಮಾಡಲಾಗುತ್ತಿದೆ. ತಾಲೂಕು ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read