ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಇ- ಖಾತಾ ವಿತರಣೆ ಮತ್ತಷ್ಟು ಸರಳ, ನಿವಾಸಿ ಸಂಘಗಳೊಂದಿಗೆ ಮೇಳ ಆಯೋಜನೆ

ಬೆಂಗಳೂರು: ನಾಗರೀಕರ ಅನುಕೂಲಕ್ಕಾಗಿ ಇ- ಖಾತಾ ವಿತರಣೆಯನ್ನು ಮತ್ತಷ್ಟು ಸರಳಗೊಳಿಸಲು ಬಿಬಿಎಂಪಿ ಮುಂದಾಗಿದೆ.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘಗಳ ಸಹಯೋಗದಲ್ಲಿ ಇ- ಖಾತಾ ವಿತರಣೆ ಮೇಳಗಳನ್ನು ಆಯೋಜಿಸಲಾಗುವುದು. ಈ ಮೂಲಕ ನಗರದಲ್ಲಿ ಇ- ಖಾತಾ ವಿತರಣೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಆಸಕ್ತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘ, ಇತರೆ ಸಂಘ ಸಂಸ್ಥೆಗಳ ಜೊತೆಗೂಡಿ ಇ- ಖಾತಾ ಮೇಳಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಮೇಳ ಆಯೋಜಿಸುವ ಕುರಿತು ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಿದ್ದಾರೆ.

ಆಸಕ್ತ ನಿವಾಸಿ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘಟನೆ ಪದಾಧಿಕಾರಗಳನ್ನು ಭೇಟಿ ಮಾಡಿ ವಾಟ್ಸಾಪ್ ಗ್ರೂಪ್ ರಚಿಸಬೇಕು. ಗ್ರೂಪ್ ಗೆ ಅಪಾರ್ಟ್ಮೆಂಟ್ ಮತ್ತು ಲೇಔಟ್ ನಾಗರಿಕನನ್ನು ಸೇರಿಸಬೇಕು. ನಂತರ ಕರಡು ಇ- ಖಾತಾ ಪಡೆಯಲು ಬೇಕಾದ ಪ್ರಾಥಮಿಕ ಮಾಹಿತಿ ಪಡೆಯಬೇಕು. ಕರಡು ಇ- ಖಾತಾ ಡೌನ್ಲೋಡ್ ಮಾಡಿ ನೀಡಬೇಕು. 10ರಿಂದ 15 ದಿನಗಳ ನಂತರ ಎಲ್ಲರಿಗೂ ಅನುಕೂಲವಾಗುವ ದಿನ ಮತ್ತು ಸ್ಥಳದಲ್ಲಿ ಇ- ಖಾತಾ ಮೇಳ ಆಯೋಜಿಸಿ ಇ- ಖಾತಾ ನೀಡಲು ಕ್ರಮ ವಹಿಸಬೇಕು.

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ, ಆಸ್ತಿಯ ದಸ್ತಾವೇಜು, ಕಟ್ಟಡ ಅಥವಾ ಪ್ಲಾಟ್ ಫೋಟೋ, ವಿದ್ಯುತ್ ಬಿಲ್ ಸಂಖ್ಯೆ, ಖಾತಾ ಪ್ರಮಾಣ ಪತ್ರವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಹಾಕದಂತೆ ಸೂಚಿಸಬೇಕು.

ಇ- ಖಾತಾ ಪಡೆಯಲು ಅರ್ಜಿ ಸಲ್ಲಿಸುವ ಮಾಲೀಕರಿಗೆ ಋಣಭಾರ ಪ್ರಮಾಣ ಪತ್ರ ಅಗತ್ಯವಿಲ್ಲ. 7 ದಿನಗಳ ಒಳಗೆ ಇರಬೇಕು ಎನ್ನುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read