ಬೆಂಗಳೂರು: ಪರಸ್ತ್ರೀ ಸಹವಾಸಕ್ಕೆ ಬಿದ್ದು ಕಟ್ಟಿಕೊಂಡ ಹೆಂಡತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಆರೋಪದಲ್ಲಿ ಡಿವೈಎಸ್ ಪಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಶಂಕ್ರಪ್ಪ ವಿರುದ್ಧ ಬೆಂಗಳೂರು ನಗರ ಈಶಾನ್ಯ ಮಹಿಳಾ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಡಿವೈ ಎಸ್ ಪಿ ಶಂಕ್ರಪ್ಪಗೆ ಪತ್ನಿ, ಕಾಲೇಜಿಗೆ ಹೋಗುವ ಮಗ ಕೂಡ ಇದ್ದಾರೆ. ಆದಾಗ್ಯೂ ಪರಸ್ತ್ರೀ ಸಹವಾಸಕ್ಕೆ ಬಿದ್ದು ಪತ್ನಿಗೆ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪತ್ನಿ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಬೇರೊಂದು ಹೆಣ್ಣನ್ನು ಅಕ್ರಮವಾಗಿಯೂ ವಿವಾಹವಾಗಿದ್ದಾರೆ. ಡಿವೈ ಎಸ್ ಪಿ ಪತ್ನಿಗೆ ಅನ್ಯಾಯ ಮಾಡುತ್ತಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಡಿಜಿ & ಐಜಿಪಿಗೂ ದೂರು ನೀಡಿದ್ದಾರೆ.
ತನ್ನ ಪತಿ ಸಹವಾಸ ಮಾಡಬೇಡ ದೂರವಿರುವಂತೆ ಮಹಿಳೆಗೆ ಹೇಳಿದರೂ ಆಕೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಡಿವೈ ಎಸ್ ಪಿ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವೈ ಎಸ್ ಪಿ ಶಂಕ್ರಪ್ಪ ಹಾಗೂ ಮಹಿಳೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.