ಗೋವಾ ರೆಸಾರ್ಟ್ ನಲ್ಲಿದ್ದ ಡಚ್ ಪ್ರವಾಸಿ ಮೇಲೆ ಹಲ್ಲೆ;‌ ಆರೋಪಿ ಅರೆಸ್ಟ್

ಉತ್ತರ ಗೋವಾದ ಪೆರ್ನೆಮ್‌ನಲ್ಲಿರುವ ರೆಸಾರ್ಟ್‌ನಲ್ಲಿ ಡಚ್ ಪ್ರವಾಸಿಗರಿಗೆ ಚೂರಿಯಿಂದ ಇರಿದು ಕಿರುಕುಳ ನೀಡಿದ್ದಕ್ಕಾಗಿ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಘಟನೆ ವೇಳೆ ಡಚ್ ಪ್ರವಾಸಿಗರಿಗೆ ಸಹಾಯ ಮಾಡಲು ಹೋದ ಇನ್ನೊಬ್ಬ ವ್ಯಕ್ತಿಯನ್ನೂ ಸಹ ಆರೋಪಿ ಇರಿದಿದ್ದು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಅಭಿಷೇಕ್ ವರ್ಮಾ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಯುರಿಕೋ ಎಂದು ಗುರುತಿಸಲಾಗಿದೆ.

ಪೊಲೀಸ್ ಅಧೀಕ್ಷಕ (ಎಸ್‌ಪಿ) ನಿಧಿನ್ ವಲ್ಸನ್ ಪ್ರಕಾರ, ದೂರುದಾರ ಮಹಿಳೆ ಬಾಡಿಗೆ ಟೆಂಟ್‌ಗೆ ರೆಸಾರ್ಟ್ ಸಿಬ್ಬಂದಿಯೊಬ್ಬರು ಅತಿಕ್ರಮಣ ಮಾಡಿದ್ದಾರೆ, ಆ ವೇಳೆ ದೂರುದಾರ ಮಹಿಳೆ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಾಗ, ಸ್ಥಳೀಯರೊಬ್ಬರು ಆರೋಪಿಯಿಂದ ಅವಳನ್ನು ರಕ್ಷಿಸಲು ಮುಂದಾಗುತ್ತಾರೆ.

ಸ್ಥಳೀಯ ವ್ಯಕ್ತಿಯು ಅಲ್ಲಿದ್ದುದನ್ನ ನೋಡಿ, ಆರೋಪಿ ಓಡಿಹೋಗಿದ್ದಾನೆ. ನಂತರ ಆರೋಪಿ ಚಾಕು ಹಿಡಿದು ಬಂದು ಸ್ಥಳೀಯ ವ್ಯಕ್ತಿ ಸೇರಿದಂತೆ ಮಹಿಳೆ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ದೂರುದಾರ ಮಹಿಳೆ ಮತ್ತು ಸ್ಥಳೀಯ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಅಪರಾಧದ ವೇಳೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು ಐಪಿಸಿ ಸೆಕ್ಷನ್ 452, 354, 307, 506(II) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಿಧಿನ್ ವಲ್ಸನ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read