ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ ಒಂದು ವಿಧಾನ ಈಗ ವೈರಲ್​ ಆಗಿದೆ.

ಸಾಮಾನ್ಯವಾಗಿ ಮನೆಯಲ್ಲಿ ಮೂರ್ನಾಲ್ಕು ಬಗೆಯಲ್ಲಿ ಚಹಾವನ್ನು ಮಾಡಬಹುದು. ಆದರೆ 20-30 ಬಗೆಯ ಚಹಾ ಮಾಡುವ ಟೀ ಸ್ಟಾಲ್​ಗಳನ್ನು ನಾವು ನೋಡಬಹುದು. ಅದೇ ರೀತಿ ಮನೆಯಲ್ಲಿ ಒಂದೇ ರೀತಿ ಚಹಾ ಮಾಡಿ ಬೇಸರವಾಗಿದ್ದವರಿಗೆ ಇದನ್ನು ಮನೆಯಲ್ಲಿ ಮಾಡಿ ನೋಡಬಹುದು ಎನ್ನಲಾಗಿದೆ.

ಇದಕ್ಕೆ ದಮ್ ಕಿ ಚಾಯ್ ಎಂದು ಹೆಸರು ಕೊಡಲಾಗಿದೆ. ಅರ್ಧ ತುಂಬಿದ ನೀರಿನ ಪಾತ್ರೆಯನ್ನು ‘ಮಲ್ಮಲ್’ ಬಟ್ಟೆಯಿಂದ ಮುಚ್ಚಿ ಅದರ ಮೇಲೆ ಕೆಲವು ಮಸಾಲೆಗಳನ್ನು ಇಡಬೇಕು. ನಂತರ ಚಹಾದ ಎಲೆಗಳು, ಸಕ್ಕರೆ, ಶುಂಠಿ ತುಂಡುಗಳು, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿಯನ್ನು ಬಟ್ಟೆಯ ಮೇಲೆ ಇರಿಸಿ, ಕುಕ್ಕರ್‌ನಲ್ಲಿ ಇರಿಸಿ ನಂತರ 5-6 ನಿಮಿಷಗಳ ಕಾಲ ಮುಚ್ಚಬೇಕು. ಕುದಿಯುವ ನಂತರ, ಚಾಯ್ ಮಿಶ್ರಣವನ್ನು ಹಾಲಿಗೆ ಸೇರಿಸಬೇಕು ಎಂದು ಇದರಲ್ಲಿ ಹೇಳಲಾಗಿದೆ.

https://www.youtube.com/watch?v=6nxxBcrGPwY&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read