ಬಾಲಿವುಡ್ ಶೈಲಿಯಲ್ಲಿ ವಧುವಿಗೆ ಸರ್ಪ್ರೈಸ್: ಪಾಕ್ ವರನ ವಿಡಿಯೋ ವೈರಲ್ !

ಪಾಕಿಸ್ತಾನದ ವರನೊಬ್ಬ ತನ್ನ ವಧುವನ್ನು ಬಾಲಿವುಡ್ ಶೈಲಿಯಲ್ಲಿ ಅಚ್ಚರಿಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಈ ಹೃದಯಸ್ಪರ್ಶಿ ವೀಡಿಯೊವು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ವರನ ರೋಮ್ಯಾಂಟಿಕ್ ಗೆಸ್ಚರ್‌ಗೆ ಮಾರುಹೋಗಿದ್ದಾರೆ.

ಮದುವೆಯ ಛಾಯಾಗ್ರಾಹಕ ಮೊಹಮ್ಮದ್ ಘಫರ್ ಫಾರೂಕ್, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ವಧು ಅತೀಕಾ ಅಲಿ ಖವಾಜಾ ತನ್ನ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ತನ್ನ ಭಾವಿ ಪತಿ ಖವಾಜಾ ಅಲಿ ಅಮೀರ್ ಮದುವೆಗೆ ಒಂದು ದಿನ ಮೊದಲು ಭವ್ಯವಾದ ಪ್ರವೇಶ ಮಾಡುತ್ತಿರುವುದನ್ನು ನೋಡುತ್ತಾಳೆ.

ಅಮೀರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದಿದ್ದು, ಕೆಲವರು ಬಾನೆಟ್ ಮೇಲೆ ಕುಳಿತಿದ್ದರು. ಕುಚ್ ಕುಚ್ ಹೋತಾ ಹೈ ಚಿತ್ರದ ಕ್ಲಾಸಿಕ್ ಬಾಲಿವುಡ್ ಹಾಡು “ಸಜನ್ ಜಿ ಘರ್ ಆಯೇ” ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ, ಕಾರ್ ನಿಂತ ತಕ್ಷಣ, ಅಮೀರ್ ನಾಯಕನಂತೆ ಹೊರಬರುತ್ತಾನೆ. ನಂತರ ನೃತ್ಯ ಆರಂಭಿಸಿದ್ದು, ಅವನ ಸ್ನೇಹಿತರು ಸೇರಿಕೊಳ್ಳುತ್ತಾರೆ. ಅಮೀರ್ ನೃತ್ಯ ಮಾಡುವುದನ್ನು ನೋಡುತ್ತಿದ್ದಂತೆ ಅತೀಕಾಗೆ ನಗು ನಿಲ್ಲಿಸಲು ಸಾಧ್ಯವಾಗಲಿಲ್ಲ.

ಆದರೆ ಅಷ್ಟೇ ಅಲ್ಲ, ಅತೀಕಾ ತನ್ನ ಬಾಲ್ಕನಿಯಿಂದ ಕೆಳಗಿಳಿದು ಅಮೀರ್‌ ಜೊತೆ ಸೇರಿಕೊಳ್ಳುತ್ತಾಳೆ. ನಂತರ ಈ ಜೋಡಿ ಒಟ್ಟಿಗೆ ನೃತ್ಯ ಮಾಡುತ್ತಾರೆ, ಸ್ನೇಹಿತರು ಮತ್ತು ಕುಟುಂಬದವರು ಶೀಘ್ರದಲ್ಲೇ ಮದುವೆಯಾಗುವ ದಂಪತಿಗಳಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read