2022ರಲ್ಲಿ ಡುಕಾಟಿಗೆ ಭಾರಿ ಡಿಮಾಂಡ್​: ದಾಖಲೆ ಬರೆದ ಮೋಟಾರ್ ​ಸೈಕಲ್​

2022 ಡುಕಾಟಿ ಬ್ರ್ಯಾಂಡ್​ಗೆ ಅತ್ಯುತ್ತಮ ವರ್ಷವಾಗಿ ಪರಿಣಮಿಸಿದೆ. ಕಳೆದ ವರ್ಷ ಡುಕಾಟಿ ವಿಶ್ವದಾದ್ಯಂತ ದಾಖಲೆಯ 61,562 ಮೋಟಾರ್‌ಸೈಕಲ್‌ಗಳನ್ನು ವಿತರಿಸಿದೆ. 2021ರಲ್ಲಿ ಇದರ ಮಾರಾಟ 59,346 ಯುನಿಟ್‌ಗಳು.ಈ ಹಿನ್ನೆಲೆಯಲ್ಲಿ 2021 ಕ್ಕಿಂತ 2022ರಲ್ಲಿ 3.6 ಶೇಕಡಾ ಹೆಚ್ಚಳ ಸಾಧಿಸಿದೆ.

ವಾಣಿಜ್ಯ ಯಶಸ್ಸಿನ ಜೊತೆಗೆ, ಡುಕಾಟಿ ಮೋಟೋಜಿಪಿ ಮತ್ತು ವರ್ಲ್ಡ್ ಎಸ್‌ಬಿಕೆ ಕೂಡ ಯಶಸ್ಸು ಗಳಿಸಿದೆ. ಇಟಲಿಯಲ್ಲಿ 9,578 ಡುಕಾಟಿ ಬೈಕ್‌ ಮಾರಾಟವಾಗಿದ್ದು, ಇದು ಅತಿ ಹೆಚ್ಚು ಮಾರಾಟವಾದ ಮಾರುಕಟ್ಟೆಯಾಗಿದೆ.

ಈ ಹಿನ್ನೆಲೆಯಲ್ಲಿ ಇಟಲಿ ಡುಕಾಟಿ ಬ್ರ್ಯಾಂಡ್‌ನ ಉತ್ತಮ-ಮಾರಾಟದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಇದನ್ನು ಹೊರತುಪಡಿಸಿದರೆ, ಅಮೆರಿಕದಲ್ಲಿ 8,441 ಬೈಕ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ಜರ್ಮನಿಯಲ್ಲಿ 6,678 ಮೋಟಾರ್‌ ಸೈಕಲ್‌ಗಳು ಮಾರಾಟವಾಗಿದ್ದು, ಇದು ಡುಕಾಟಿಯ ಮೂರನೇ ಹೆಚ್ಚು ಮಾರಾಟವಾದ ಮಾರುಕಟ್ಟೆಯಾಗಿದೆ.

2022ರಲ್ಲಿ ಡುಟಾಕಿ ವಿಶ್ವಾದ್ಯಂತ 821 ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದು ಜಾಗತಿಕ ದಾಖಲೆಯಾಗಿದೆ. ಚಂಡೀಗಢ ಮತ್ತು ಅಹಮದಾಬಾದ್‌ನಲ್ಲಿ ಭಾರತದಲ್ಲಿ ಎರಡು ಹೊಸ ಡೀಲರ್‌ಶಿಪ್‌ಗಳ ಸೇರ್ಪಡೆ ಇದರಲ್ಲಿ ಒಳಗೊಂಡಿದೆ.

img

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read