BIG NEWS: ನಾಳೆಯಿಂದ ರಾಜ್ಯದಲ್ಲಿ ವಾಹನ ಸವಾರರಿಗೂ ತಟ್ಟಲಿದೆ ಮತ್ತಷ್ಟು ಬೆಲೆ ಏರಿಕೆ ಬಿಸಿ: ಟೋಲ್ ದರವೂ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಮತ್ತಷ್ಟು ದುಬಾರಿ ದುನಿಯಾ ಆರಂಭವಾಗಲಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ನಾಳೆಯಿಂದ ಮತ್ತಷ್ಟು ಬೆಲೆ ಏರಿಕೆ ಆರಂಭವಾಗಲಿದೆ. ಹಾಲಿನ ದರ ಹೆಚ್ಚಳವಾಗಿದ್ದು, ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ, ಇದರ ಜೊತೆಗೆ ವಿದ್ಯುತ್ ದರ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ನಾಳೆಯಿಂದ ಕಸಕ್ಕೂ ತೆರಿಗೆ ಪಾವತಿ ಮಾಡಬೇಕಾದ ದುಸ್ಥಿತಿ ಬರಲಿದೆ.

ಏಪ್ರಿಲ್ 1ರಿಂದ ಕಸಕ್ಕೆ ಟ್ಯಾಕ್ಸ್ ಪಾವತಿಸುವಂತೆ ಬಿಬಿಎಂಪಿ ಸೂಚನೆ ನೀಡಿದ್ದು, ಬೆಂಗಳೂರಿಗರಿಗೆ ಬೆಲೆ ಏರಿಕೆಯ ತ್ರಿಬಲ್ ಶಾಕ್ ಎದುರಾಗಲಿದೆ. ಮತ್ತೊಂದೆಡೆ ನಾಳೆಯಿಂದ ರಾಜ್ಯಾದ್ಯಂತ ಟೋಲ್ ದರವೂ ಹೆಚ್ಚಳವಾಗಲಿದೆ.

ಪರಿಷ್ಕೃತದರವನ್ನು ನಾಳೆಯಿಂದಲೇ ಹೆದ್ದಾರಿ ಪ್ರಾಧಿಕಾರ ಜಾರಿಗೆ ತರಲಿದ್ದು, ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳವಾಗಲಿದೆ. ಟೋಲ್ ಗಳಲ್ಲಿ ವಾಹನಸವಾರರಿಗೆ ಶೇ.3ರಿಂದ ಶೇ.5ರಷ್ಟು ದರ ಹೆಚ್ಚಳ ಮಾಡಲಾಗುತ್ತಿದೆ.

ಬೆಂಗಳೂರು-ಮೈಸೂರು ಮಾರ್ಗದ ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗಲಿ ಟೋಲ್, ಏರ್ ಪೋರ್ಟ್ ರಸ್ತೆಯ ಸಾದಹಳ್ಳಿ, ಹುಲಿಕುಂಟೆ, ನಲ್ಲೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿನ ಟೋಲ್ ದರ ಹೆಚ್ಚಳ ಮಾಡಲಾಗಿದ್ದು, ಒಟ್ಟು 66 ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ ಮಾಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read