ಶಾಪಿಂಗ್‌ ಮಾಡಲು ಹೋಗಿ 70 ಲಕ್ಷ ರೂ. ಖರ್ಚು ಮಾಡಿ ಬಂದ ಮಹಿಳೆ

ಸಾಮಾನ್ಯವಾಗಿ ವೀಕೆಂಡ್ ಶಾಪಿಂಗ್ ಎಂದರೆ ಗೃಹಸ್ಥ ಗಂಡಸರಿಗೆ ಒಂಥರಾ ಕಳವಳ ತರುವ ಚಟುವಟಿಕೆ ಎಂದೇ ಹೇಳಬಹುದು. ಶಾಪಿಂಗ್ ಪ್ರಿಯ ಶ್ರೀಮತಿಯರಿದ್ದರಂತೂ ಗಂಡಂದಿರ ಜೇಬಿಗೆ ಸರಿಯಾಗಿ ಕತ್ತರಿ ಬೀಳುವುದು ಗ್ಯಾರಂಟಿ.

ದುಬಾಯ್‌ನಲ್ಲಿ ವಾಸಿಸುವ ಸೋದಿ ಹೆಸರಿನ ಮಹಿಳೆಯೊಬ್ಬರು ಒಂದೇ ದಿನದಲ್ಲಿ 70 ಲಕ್ಷ ರೂ.ಗಳ ಶಾಪಿಂಗ್ ಮಾಡಿದ್ದಾರೆ. ಡೇಲಿ ಸ್ಟಾರ್‌ ದೈನಿಕದಲ್ಲಿ ಬಂದ ವರದಿಯೊಂದರ ಅನುಸಾರ, ಸೋದಿ ಇರುವುದೇ  ಪತಿಯ ದುಡ್ಡು ಖರ್ಚು ಮಾಡಿ ಮಜಾ ಉಡಾಯಿಸಲಂತೆ.

“ನನ್ನ ಪತಿಯ ಮೂಡ್‌ ಅನುಸಾರ, ನಾವು ಒಮ್ಮೆ ಶಾಪಿಂಗ್ ಮಾಡಲು ಹೊರಟರೆ ಸಾಮಾನ್ಯವಾಗಿ £3,600 ರಿಂದ £72,000ದಷ್ಟು ಹಣ ವ್ಯಯಿಸುತ್ತೇವೆ,” ಎಂದು ಸೋದಿ ತಿಳಿಸಿದ್ದಾರೆ. ತಮಗೆ ಡಯೋರ್‌ ಡಿಸೈನರ್‌ ಇಷ್ಟವಾದರೆ ತಮ್ಮ ಪತಿಗೆ ಹರ್ಮೆಸ್ ಇಷ್ಟವಾಗುತ್ತಾರೆ ಎನ್ನುತ್ತಾರೆ ಸೋದಿ.

ದುಬಾರಿ ರೆಸಾರ್ಟ್‌ಗಳು ಹಾಗೂ ತಾಣಗಳಿಗೆ ಭೇಟಿ ಕೊಟ್ಟು ಐಷಾರಾಮಿ ಜೀವನ ನಡೆಸುವ ತಮ್ಮ ಪ್ರವಾಸಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಈಕೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಲೇ ಇರುತ್ತಾರೆ. ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈಕೆಗೆ ಮಿಲಿಯನ್‌ಗಟ್ಟಲೇ ಅನುಯಾಯಿಗಳಿದ್ದಾರಂತೆ.

ತನಗೆ ಕೇವಲ ಡಿಸೈನರ್‌ ಬಟ್ಟೆಗಳು ಹಾಗೂ ಬ್ಯಾಗುಗಳೇ ಇಷ್ಟವೆನ್ನುವ ಸೋದಿ, ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೆಲ್ಲಾ ಪ್ರಯಾಣ ಮಾಡಿದ್ದು, ಪ್ರತಿ ಬಾರಿಯ ಪ್ರಯಾಣದ ವೇಳೆ 14-15 ಲಕ್ಷ ಖರ್ಚು ಮಾಡುತ್ತಾರಂತೆ.

“ನನಗೆ ಅಚ್ಚರಿಗಳೆಂದರೆ ಇಷ್ಟ. ಹಾಗಾಗಿ ಜಮಾಲ್‌ ನಮಗಾಗಿ 96,000 ರೂ. ಖರ್ಚು ಮಾಡಿ ರೆಸ್ಟೋರೆಂಟ್‌ ಬುಕ್ ಮಾಡಿದಾಗ ನನಗೆ ಖುಷಿಯಾಗುತ್ತದೆ. ಆತ ನನಗೆ ರಾತ್ರಿ ಏನು ಧರಿಸಬೇಕೆನಿಸುತ್ತದೋ ಆ ಬಟ್ಟೆಗಳನ್ನು ಕಳುಹಿಸುತ್ತಾನೆ. ಆತ ಸದಾ ರಾತ್ರಿಗಳನ್ನು ಅಚ್ಚರಿಗಳ ಕೊಡುವ ಮೂಲಕ ಕಳೆಯುತ್ತಾನೆ,” ಎಂದು ಪತಿ ಬಗ್ಗೆ ಮೆಚ್ಚಿಕೊಂಡು ಮಾತನಾಡುತ್ತಾರೆ ಸೋದಿ.

ಸಸ್ಸೆಕ್ಸ್‌ನಲ್ಲಿ ಜನಿಸಿದ ಸೋದಿಯ ಪತಿ ಸೌದಿ ಅರೇಬಿಯಾದ ಮೂಲದ ಧನಿಕ. ಆರು ವರ್ಷದವಳಿದ್ದಾಗ ಸೋದಿ ತನ್ನ ಕುಟುಂಬದೊಂದಿಗೆ ದುಬಾಯ್‌ಗೆ ಬಂದು ನೆಲೆಸಿದ್ದಾರೆ. ದುಬಾಯ್‌ ವಿವಿಯಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರೂ ಕಳೆದ ಎರಡು ವರ್ಷಗಳಿಂದ ಜೊತೆಯಲ್ಲಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read