ಕೆಲವು ಮದ್ಯಪ್ರಿಯರಿಗೆ ಎಣ್ಣೆ ಸಿಕ್ಕಿದ್ರೆ ಸಾಕು ಕೆಲಸ ಕಾರ್ಯ ಬಿಟ್ಟು ಬಾಟಲ್ ಓಪನ್ ಮಾಡಿ ಕುಡಿಯಲು ಶುರುಮಾಡಿಬಿಡ್ತಾರೆ. ಅಂಥವರ ಕಣ್ಣ ಮುಂದೆ ರಾಶಿ ರಾಶಿ ಮದ್ಯದ ಬಾಟಲ್ ಗಳಿದ್ರೆ ಸುಮ್ನೆ ಬಿಡ್ತಾರಾ? ಸಿಕ್ಕಿದ್ದೇ ಸೀರುಂಡೆ ಎಂದು ಕೈಗೆ ಸಿಕ್ಕಿದ್ದಷ್ಟು ದೋಚಿಕೊಂಡು ಓಡ್ತಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಇಂಥದ್ದೇ ಘಟನೆ ನಡೆದಿದೆ.
ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಧ್ವಂಸ ಮಾಡುತ್ತಿದ್ದಾಗ ಕುಡುಕರು ಅವುಗಳನ್ನು ಲೂಟಿ ಮಾಡಲು ಯತ್ನಿಸಿದ್ದಾರೆ. ಬಾಟಲಿಗಳನ್ನು ದೋಚಿಕೊಂಡು ಓಡಲು ಮದ್ಯಪ್ರಿಯರು ಮುಂದಾದಾಗ ಅವರನ್ನು ಪೊಲೀಸರು ನಿಯಂತ್ರಿಸುವಾಗ ಪರಿಸ್ಥಿತಿ ಗೊಂದಲದ ಗೂಡಾಯಿತು.
ಏಟುಕೂರು ರಸ್ತೆಯ ಡಂಪಿಂಗ್ ಯಾರ್ಡ್‌ನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು 50 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಿಲೇವಾರಿ ಮಾಡುತ್ತಿದ್ದರು. ಈ ವೇಳೆ ಹಲವು ಮಂದಿ ಬಾಟಲಿಗಳ ಕಡೆಗೆ ಧಾವಿಸಿ, ಅವುಗಳನ್ನು ಹಿಡಿದು ಸ್ಥಳದಿಂದ ಪರಾರಿಯಾದರು.
ಪೊಲೀಸ್ ಸಿಬ್ಬಂದಿ ಇದ್ದರೂ ದುಷ್ಕರ್ಮಿಗಳು ಒಂದಷ್ಟು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಪರಾರಿಯಾದರು. ಈ ದರೋಡೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
https://twitter.com/jsuryareddy/status/1833379460223054251?ref_src=twsrc%5Etfw%7Ctwcamp%5Etweetembed%7Ctwterm%5E1833379460223054251%7Ctwgr%5Ee660c7ad226696f45766f0ad15aa3040174ae21a%7Ctwcon%5Es1_&ref_url=https%3A%2F%2Fwww.siasat.com%2Fvideo-chaos-in-aps-guntur-as-locals-loot-seized-liquor-during-police-destruction-3093397%2F