ಪುಣೆಯಲ್ಲಿ ವಿಚಿತ್ರ ಘಟನೆ: ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ಬಸ್‌ಗೆ ಅಡ್ಡ ಕುಳಿತ ಯುವಕ | Viral Video

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ PMPML (ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್) ಬಸ್‌ನ ಮುಂದೆ ಕುಳಿತು, ಸರಿಯಲು ನಿರಾಕರಿಸಿದ್ದಾನೆ. ವಿಡಿಯೋದಲ್ಲಿ ಸೆರೆಯಾದ ಈ ಘಟನೆ, ಸಾಮಾಜಿಕ ಮಾಧ್ಯಮ ಬಳಕೆದಾರರ ನಡುವೆ ಚರ್ಚೆಗೆ ಕಾರಣವಾಗಿದೆ: ಈ ವ್ಯಕ್ತಿ ಕುಡಿದಿದ್ದಾನೋ, ಅಥವಾ ಇನ್‌ಸ್ಟಾಗ್ರಾಂ ರೀಲ್‌ಗಾಗಿ ಗಮನ ಸೆಳೆಯುವ ಪ್ರಯತ್ನವೇ? ಎಂದು ಪ್ರಶ್ನಿಸುತ್ತಿದ್ದಾರೆ.

ವೈರಲ್ ಕ್ಲಿಪ್‌ನಲ್ಲಿ, ವಿಗ್ ಧರಿಸಿದ ವ್ಯಕ್ತಿಯೊಬ್ಬ ರಸ್ತೆಯ ಮಧ್ಯದಲ್ಲಿ ಕುಳಿತಿದ್ದು, PMPML ಬಸ್ ಸಮೀಪಿಸುತ್ತಿದ್ದರೂ ಅಲ್ಲಿಂದ ಕದಲುತ್ತಿಲ್ಲ. ಬಸ್ ಆತನಿಂದ ಕೆಲವೇ ಇಂಚುಗಳ ದೂರದಲ್ಲಿ ನಿಲ್ಲುತ್ತದೆ, ಆದರೂ ಆತ ಕುಳಿತೇ ಇರುತ್ತಾನೆ. ಕೆಲ ಕ್ಷಣಗಳ ನಂತರ, ಆತ ನಿಧಾನವಾಗಿ ಎದ್ದು ನೃತ್ಯ ಮಾಡಲು ಪ್ರಾರಂಭಿಸುತ್ತಾನೆ.

ಈ ಘಟನೆ ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆಳೆಯುತ್ತಿರುವ ಅಪಾಯಕಾರಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ, ಅಲ್ಲಿ ವ್ಯಕ್ತಿಗಳು ಗಮನ ಸೆಳೆಯಲು ವಿಚಿತ್ರ ಅಥವಾ ಅಪಾಯಕಾರಿ ಸಾಹಸಗಳಿಗೆ ಇಳಿಯುತ್ತಾರೆ. ವಿಚಿತ್ರ ಆಹಾರ ಸಮ್ಮಿಶ್ರಣಗಳಿಂದ ಹಿಡಿದು ಜಲಾವೃತವಾದ ರಸ್ತೆಗಳಲ್ಲಿ ಸರ್ಫಿಂಗ್ ಮಾಡುವವರೆಗೂ, ಇಂಟರ್‌ನೆಟ್‌ನಲ್ಲಿ ಎಲ್ಲೆಗಳನ್ನು ಮೀರಿದ “ಕಂಟೆಂಟ್‌”ಗಳು ತುಂಬಿವೆ. ಪುಣೆ ಕೂಡ ಇಂತಹ ಕಂಟೆಂಟ್‌ ಕ್ರಿಯೆಟರ್‌ಗಳ ಹಾವಳಿಯಿಂದ ಹೊರತಾಗಿಲ್ಲ.

PMPML ಬಸ್ ಅನ್ನು ಇಂತಹ ಸಾಹಸಕ್ಕೆ ಬಳಸಿಕೊಂಡಿರುವುದು ಇದೇ ಮೊದಲಲ್ಲ. ಹಿಂದೆ, ಫರ್ಗ್ಯುಸನ್ ಕಾಲೇಜ್ ರಸ್ತೆಯಲ್ಲಿ ವಿದ್ಯಾರ್ಥಿಯೊಬ್ಬ PMPML ಬಸ್ ಅನ್ನು ನಿಲ್ಲಿಸಿದ್ದು ಕಂಡುಬಂದಿತ್ತು. ವಿದ್ಯಾರ್ಥಿ ಬಸ್ ಹತ್ತಲು ಉದ್ದೇಶಿಸಿದ್ದಾನೆ ಎಂದು ಭಾವಿಸಿ ಚಾಲಕ ಬಸ್ ನಿಲ್ಲಿಸಿದ್ದನು. ಆದರೆ, ವಿದ್ಯಾರ್ಥಿ ಕೇವಲ ಬಸ್ ಮೆಟ್ಟಿಲಿನ ಮೇಲೆ ಒಂದು ಹೆಜ್ಜೆ ಇಟ್ಟು, ತನ್ನ ಶೂ ಲೇಸ್ ಕಟ್ಟಿದಂತೆ ನಟಿಸಿ, ನಂತರ ಬಸ್ ಹತ್ತದೆ ಹೊರಟು ಹೋಗಿದ್ದ, ಇದು ಬಸ್ ಸಿಬ್ಬಂದಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡಿತ್ತು.

ವೈರಲ್ ಕಂಟೆಂಟ್‌ಗಾಗಿ ಸಾರ್ವಜನಿಕ ಸೇವೆಗಳಿಗೆ ಪದೇ ಪದೇ ಅಡ್ಡಿಪಡಿಸುವುದು ಸಾರ್ವಜನಿಕ ಸುರಕ್ಷತೆ ಮತ್ತು ಆನ್‌ಲೈನ್ ಸ್ವಯಂ-ಪ್ರಚಾರದ ನೈತಿಕ ಮಿತಿಗಳ ಬಗ್ಗೆ ಕಳವಳ ಮೂಡಿಸಿದೆ. ಇಂತಹ ಕೃತ್ಯಗಳು ಒಳಗೊಂಡಿರುವ ವ್ಯಕ್ತಿಗಳಿಗೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ, ಅಸಂಖ್ಯಾತ ಪ್ರಯಾಣಿಕರಿಗೆ ಅನಾನುಕೂಲವನ್ನುಂಟುಮಾಡುತ್ತವೆ ಮತ್ತು ಸಾರ್ವಜನಿಕ ಸೇವೆಗಳ ಮೇಲೆ ಅನಾವಶ್ಯಕ ಒತ್ತಡವನ್ನುಂಟುಮಾಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read