ಆಂಧ್ರಪ್ರದೇಶದ ವಿಲಕ್ಷಣ ಘಟನೆಯೊಂದು ನಡೆದಿದೆ. ಸತ್ಯಸಾಯಿ ಜಿಲ್ಲೆಯ ಕದಿರಿಯ ಯುವಕ ನಾಗರಾಜು ಕುಡಿದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕದರಿಯ ಡಿಗ್ರಿ ಕಾಲೇಜು ಬಳಿ ಈ ಡ್ರಾಮಾ ನಡೆದಿದೆ. ರಸ್ತೆ ಬದಿಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಕುಡಿದ ಅಮಲಿನಲ್ಲಿದ್ದ ನಾಗರಾಜು ಹಾವನ್ನು ಮುಟ್ಟುವ ಪ್ರಯತ್ನ ನಡೆಸಿದ್ದಾನೆ. ಅದಕ್ಕೆ ಹೊಡೆದಿದ್ದಾನೆ. ಕಾಲಿನಿಂದ ತುಳಿದಿದ್ದಾನೆ. ಕೋಪಗೊಂಡ ನಾಗರಹಾವು ಆತನ ಕೈ ಕಚ್ಚಿದೆ.
ಅಕ್ಕಪಕ್ಕದಲ್ಲಿದ್ದವರು ನಾಗರಹಾವನ್ನು ಮುಟ್ಟದಂತೆ ನಾಗರಾಜುವಿಗೆ ಎಚ್ಚರಿಕೆ ನೀಡಿದ್ರೂ ಆತ ಅದನ್ನು ನಿರ್ಲಕ್ಷ್ಯಿಸಿದ್ದಾನೆ. ನಾಗರಹಾವು ಕಚ್ಚಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗಾಬರಿಗೊಂಡ ಜನರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಸಾವನ್ನಪ್ಪಿದ್ದಾನೆ.
https://twitter.com/sudhakarudumula/status/1816138114924175722?ref_src=twsrc%5Etfw%7Ctwcamp%5Etweetembed%7Ctwterm%5E1816138114924175722%7Ctwgr%5E05ef5ed2290d4147510ccbb0ffca324037427339%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fandhrapradeshdrunkmanplayswithcobrainkadirilandsinhospitalaftersnakebiteshimvideosurfaces-newsid-n623602650