ವಿಮಾನದಲ್ಲೇ ಕುಡುಕ ಪ್ರಯಾಣಿಕನ ಅವಾಂತರ: ವಾಂತಿ, ಮೂತ್ರ ವಿಸರ್ಜನೆ

ನವದೆಹಲಿ: ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದಲ್ಲಿ ಅಶಿಸ್ತು ತೋರಿದ್ದಾನೆ, ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ವಾಂತಿ ಮಾಡಿದ್ದಾನೆ.

ವಿಮಾನದ ಶೌಚಾಲಯದ ಸುತ್ತಲೂ ಮೂತ್ರ, ಮಲವಿಸರ್ಜನೆ ಮಾಡಿದ್ದಾನೆ. ಮಾರ್ಚ್ 26 ರಂದು ಇಂಡಿಗೋ ಫ್ಲೈಟ್ 6E 762 ಫ್ಲೈಟ್‌ನಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ರೆಸ್ಟ್ ರೂಂನಿಂದ ಹೊರಗೆ ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ವಿಮಾನದಲ್ಲಿದ್ದ ಇತರ ಪ್ರಯಾಣಿಕರು ತಿಳಿಸಿದ್ದಾರೆ.

ಕ್ಯಾಬಿನ್ ಸಿಬ್ಬಂದಿಯೊಬ್ಬರು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತಿರುವ ಫೋಟೋ ವೈರಲ್ ಆದ ನಂತರ ಆಘಾತಕಾರಿ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಯನ್ನು ವಿಮಾನದಲ್ಲಿದ್ದ ಪ್ರಯಾಣಿಕ ಭಾಸ್ಕರ್ ದೇವ್ ಕೊನ್ವಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುವಾಹಟಿಯಿಂದ ದೆಹಲಿಗೆ ಸಂಚರಿಸುತ್ತಿದ್ದ ವಿಮಾನದಲ್ಲಿ ನಶೆಯಲ್ಲಿದ್ದ ಪ್ರಯಾಣಿಕರು ಹಜಾರದಲ್ಲಿ ವಾಂತಿ ಮಾಡಿಕೊಂಡು ಶೌಚಾಲಯದ ಸುತ್ತ ಮಲವಿಸರ್ಜನೆ ಮಾಡಿದ್ದಾರೆ. ನಾಯಕಿ(Leading lady) ಶೆವತಾ ಅವರು ಎಲ್ಲಾ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಿದರು. ಎಲ್ಲಾ ಹುಡುಗಿಯರು ಪರಿಸ್ಥಿತಿಯನ್ನು ಅಸಾಧಾರಣವಾಗಿ ನಿರ್ವಹಿಸಿದರು. ಸೆಲ್ಯೂಟ್ ಗರ್ಲ್ ಪವರ್” ಎಂದು ಕಾನ್ವಾರ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read