BIG NEWS: ಡ್ರಂಕ್ & ಡ್ರೈವ್: 9 ಬಸ್ ಚಾಲಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಬೆಂಗಳೂರು: ಡ್ರಂಕ್ & ಡ್ರೈವ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ನಗರ ಸಂಚಾರಿ ಪೊಲೀಸರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ.

ಪ್ರಮುಖವಾಗಿ ಖಾಸಗಿ ಬಸ್ ಚಾಲಕರೇ ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. 881 ಬಸ್ ಚಾಲಕರನ್ನು ಪರಿಶೀಲನೆ ನಡೆಸಲಾಗಿದ್ದು, ಅವರಲ್ಲಿ 9 ಚಾಲಕರು ಕುಡಿದ ಮತ್ತಿನಲ್ಲಿ ಬಸ್ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತಿಳಿಸಿದ್ದಾರೆ.

ಕುಡಿದು ಬಸ್ ಚಾಲನೆ ಮಾಡಿದ 9 ಚಾಲಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಡಿಎಲ್ ಅಮಾನತು ಮಾಡಲು ಪತ್ರ ಬರೆಯಲಾಗಿದೆ. ಬಸ್ ಮಾಲೀಕರಿಗೂ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಇನ್ನು ಒಂದೊಂದು ಬಸ್ ಗಳಲ್ಲಿ 50-55 ಪ್ರಯಾಣಿಕರು ಇರುತ್ತಾರೆ. ಚಾಲಕರು ಈ ರೀತಿ ಕುಡಿದ ಮತ್ತಿನಲ್ಲಿ ಬಸ್ ಚಲಾಯಿಸಿದರೆ ಪ್ರಯಾಣಿಕರಿಗೂ ಆಪತ್ತು. ಕಳೆದ ಒಂದೇ ವರ್ಷದಲ್ಲಿ 24 ಖಾಸಗಿ ಬಸ್ ಗಳು ಅಪಘಾತಕ್ಕೀಡಾಗಿವೆ. ಇದರಲ್ಲಿ ಪಾದಚಾರಿಗಳು ಅತಿ ಹೆಚ್ಚು ಸಾವನ್ನಪ್ಪಿದ್ದಾರೆ. ರಸ್ತೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಯಾವ ವಾಹನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂಬುದನ್ನೂ ಪರಾಮರ್ಶಿಸಲಾಗಿದ್ದು, ಹೆಚ್ಚಾಗಿ ಖಾಸಗಿ ವಾಹನ, ವಾಟರ್ ಟ್ಯಾಂಕರ್, ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಅವುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read