BIG NEWS: ವಾಹನ ಸವಾರರೇ ಎಚ್ಚರ! ಡ್ರಂಕ್ & ಡ್ರೈವ್, ಡಿಎಲ್ ಇಲ್ಲದೇ ವಾಹನ ಚಲಾಯಿಸಿದರೆ ದಾಖಲಾಗಲಿದೆ FIR

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿ, ಅಪಘಾತಕ್ಕಿಡಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ನಿಯಂತ್ರಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾವಣೆ, ಡಿಎಲ್ ಇಲ್ಲದೇ ವಾಹನ ಚಲಾಯಿಸಿದರೆ ಇನ್ಮುಂದೆ ಎಫ್ಐಆರ್ ದಾಖಲಾಗಲಿದೆ. ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದಿಲ್ಲ. ಆದರೂ ಬೈಕ್ ಅಥವಾ ಕಾರು ಚಲಾಯಿಸುತ್ತಾರೆ. ಇಲ್ಲವೇ ಸ್ನೇಹಿತರು ಬೈಕ್ ಅಥವಾ ಬೇರೆ ವಾಹನವನ್ನು ಕೇಳಿದರೆಂದು ಬೇಡ ಎನ್ನಲಾಗದೇ ಕೊಡುವವರ ಸಂಖ್ಯೆಯೂ ಹೆಚ್ಚು. ಹೀಗೆ ನಿಮ್ಮ ವಾಹನಗಳನ್ನು ಬೇರೆಯವರಿಗೆ ಕೊಡುವ ಮುನ್ನ ಕೊಂಚ ಎಚ್ಚರ ವಹಿಸುವುದು ಅಗತ್ಯ.

ಡ್ರಂಕ್ & ಡ್ರೈವ್ ಹಾಗೂ ಡಿಎಲ್ ಇಲ್ಲದೇ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಇನ್ಮುಂದೆ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲ ವಾಹನ ಮಲೀಕರ ವಿರುದ್ಧವೂ ಪ್ರಕರಣ ದಾಖಲಾಗಲಿದೆ. ವಾಹನದ ಆರ್ ಸಿ ಯಾರ ಹೆಸರಲ್ಲಿದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತದೆ. ಈ ಕ್ರಮ ಬೆಂಗಳೂರಿನಲ್ಲಿ ಶುರುವಾಗಿದ್ದು, ಪ್ರತಿದಿನ ಹತ್ತಾರು ಎಫ್ ಐ ಆರ್ ದಾಖಲಾಗುತ್ತಿದೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read