BIG NEWS: ಭೀಕರ ಬರ, ಸಾಲದ ಹೊರೆ; ಜಮೀನಿನಲ್ಲೇ ಆತ್ಮಹತ್ಯೆಗೆ ಶರಣಾದ ರೈತ

ರಾಯಚೂರು: ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಸಾಲದ ಹೊರೆ. ಇದರಿಂದ ಕಂಗೆಟ್ಟ ರೈತ ಜಮೀನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.

60 ವರ್ಷದ ಚಂದಪ್ಪ ಮೃತ ರೈತ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಸಾಲಭಾದೆಯಿಂದ ಬೇಸತ್ತಿದ್ದ ಚಂದಪ್ಪ, ಜಮೀನಿಗೆ ಹೋಗಿ ಅಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.

3 ಎಕರೆಯಲ್ಲಿ ತೊಗರಿ ಬೆಳೆ ಹಾಕಿದ್ದರು. ಆದರೆ ಈಬಾರಿ ಬರಗಾಲದಿಂದಾಗಿ ಮೂರು ಎಕರೆಯಲ್ಲಿ ಹಾಕಿದ್ದ ತೊಗರಿ ಸಂಪೂರ್ಣ ಒಣಗಿ ಹೋಗಿತ್ತು. ತೊಗರಿ ನಂಬಿ ರೈತ ಬ್ಯಾಂಕ್ ಹಾಗೂ ಖಾಸಗಿ ವಲಯದಲ್ಲಿ 6 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ದಿಕ್ಕೆಟ್ಟು ಕಂಗಾಲಾದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read