ಕೃಷಿ ಸಾಲ ಬಡ್ಡಿ ಮನ್ನಾ ವಿನಾಯಿತಿ ಪಡೆಯಲು ಷರತ್ತುಗಳ ಬಗ್ಗೆ ರೈತರಿಗೆ ಮಾಹಿತಿ

ಬೆಂಗಳೂರು: ರಾಜ್ಯದ ರೈತರ ನೆರವಿಗೆ ಧಾವಿಸಿದ ಸರ್ಕಾರ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ಸಹಕಾರ ಸಂಘಗಳ ಮೂಲಕ ಪಡೆದುಕೊಂಡ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲು ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶ ಡಿಸೆಂಬರ್ 31, 2023ರ ವರೆಗೆ ಸುಸ್ತಿಯಾದ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಹಕಾರಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.

ಇದು ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ.

ಫೆಬ್ರವರಿ 29ರ ಒಳಗೆ ಅಸಲು ಪಾವತಿಸುವ ರೈತರಿಗೆ ಮಾತ್ರ ಬಡ್ಡಿ ಮನ್ನಾ ಲಾಭ ಸಿಗಲಿದೆ.

ಸಾಲವು 2004 ಕ್ಕಿಂತ ಹಿಂದಿನದಾಗಿದ್ದಲ್ಲಿ ಬಡ್ಡಿ ಪಾವತಿಸಲು ಬಾಕಿ ಇದ್ದ ದಿನಾಂಕದಿಂದ ಸಾಲ ಮರುಪಾವತಿ ದಿನಾಂಕದವರೆಗೆ ನಿಗದಿ ಮಾಡಲಾದ ಬಡ್ಡಿ ದರ ಅಥವಾ ಶೇಕಡ 12ರಷ್ಟು ಬಡ್ಡಿಯಲ್ಲಿ ಯಾವುದು ಕಡಿಮೆ ಅದಕ್ಕೆ ಮಾತ್ರ ಅನ್ವಯಿಸಲಾಗುವುದು.

10 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ವಿತರಿಸಿದ್ದರೂ ಆಯಾ ವರ್ಷದಲ್ಲಿ ನಿಗದಿ ಮಾಡುವ ಬಡ್ಡಿ ದರದಲ್ಲಿ ಕ್ಲೇಮು ನಿಗದಿ ಮಾಡಬೇಕು.

ಮರುಪಾವತಿಸುವ ಸಾಲಗಳಿಗೆ ಸುಸ್ತಿ ಸೇರಿದಂತೆ ವಸೂಲಿ ವೆಚ್ಚವನ್ನು ಸಹಕಾರ ಸಂಘಗಳು ಹಾಕಬಾರದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read