ಮನೆ, ವಾಣಿಜ್ಯ ಕಟ್ಟಡಗಳ ವಿಸ್ತೀರ್ಣ, ಎತ್ತರ ಪತ್ತೆ ಹಚ್ಚಿ ತೆರಿಗೆ ವಿಧಿಸಲು ಡ್ರೋನ್ ಸರ್ವೆ

ಕಲಬುರಗಿ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮನೆ, ವಾಣಿಜ್ಯ ಕಟ್ಟಡಗಳ ವಿಸ್ತೀರ್ಣಮ ಎತ್ತರ ಪತ್ತೆ ಹಚ್ಚಿ ಅವುಗಳಿಗೆ ತೆರಿಗೆ ವಿಧಿಸಲು ಡ್ರೋನ್ ಮೂಲಕ ಸರ್ವೆ ನಡೆಸಲಾಗುವುದು.

ಪೌರಾಡಳಿತ ಸಚಿವ ರಹೀಂ ಖಾನ್ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಎಷ್ಟು ಕಟ್ಟಡಗಳು ಇವೆ. ಅವುಗಳ ಎತ್ತರ ಮತ್ತು ವಿಸ್ತೀರ್ಣ ಎಷ್ಟು ಇದೆ ಎಂಬುದನ್ನು ಸರ್ವೆ ಮೂಲಕ ಪತ್ತೆ ಹಚ್ಚಲಾಗುವುದು. ಆ ಕಟ್ಟಡಗಳಿಂದ ಎಷ್ಟು ತೆರಿಗೆ ಬರಬೇಕಿದೆ ಎನ್ನುವ ವರದಿ ಸಿದ್ದಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮನೆ ಮತ್ತು ವಾಣಿಜ್ಯ ಕಟ್ಟಡಗಳ ವಿಸ್ತೀರ್ಣ ಮತ್ತು ಎತ್ತರ ಪತ್ತೆ ಹಚ್ಚಿ ಅವುಗಳಿಗೆ ತೆರಿಗೆ ವಿಧಿಸಲು ಇನ್ನು ಮೂರು ತಿಂಗಳಲ್ಲಿ ಡ್ರೋನ್ ಸರ್ವೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read