ಚಿಕ್ಕಬಳ್ಳಾಪುರ : ಆಟೋ ಚಾಲಕನೋರ್ವ ತನ್ನ ಆಟೋ ಸಾಲ ತೀರಿಸಲು ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ಆಟೋ ಚಾಲಕ ರಾಕೇಶ್ ಸಾಲ ಮಾಡಿ ಹೊಸ ಆಟೋ ಖರೀದಿಸಿದ್ದನು. ಅಲ್ಲದೇ ಮೂರು ತಿಂಗಳಿನಿಂದ ಇಎಮ್ಐ ಕಟ್ಟಿರಲಿಲ್ಲ. ಅಲ್ಲದೇ ಹಲವು ಕಡೆ ಕೈ ಸಾಲ ಕೂಡ ಮಾಡಿಕೊಂಡಿದ್ದನು. ಸಾಲ ತೀರಿಸಲು ಆಗದೇ ಸ್ನೇಹಿತೆಯನ್ನೇ ಹತ್ಯೆ ಮಾಡಿದ್ದಾನೆ. ಆಟೋ ಚಾಲಕ ಹಾಗೂ ಅರ್ಚನಾ ಒಳ್ಳೆಯ ಸ್ನೇಹಿತರಾಗಿದ್ದರು. ಇತ್ತೀಚೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುವಾಗ ರಾಕೇಶ್ ಅರ್ಚನಾಳ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರದ ಮೇಲೆ ಕಣ್ಣು ಹಾಕಿದ್ದಾನೆ.ನಂತರ ಮತ್ತೋರ್ವ ಸ್ನೇಹಿತೆ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದನು.,ಆದ್ರೆ ನಿಹಾರಿಕಾ ತಾನೂ ಬರೋಕೆ ಆಗಲ್ಲ ಅಂತ ಅಂಜಲಿ ಎಂಬ ಯುವತಿಯನ್ನ ಕಳುಹಿಸಿಕೊಟ್ಟಿದ್ದಾಳೆ. ಅಂಜಲಿ ತನ್ನ ಸ್ನೇಹಿತ ನವೀನ್ ಎಂಬಾತನನ್ನು ಜೊತೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ.
ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನು ಊಟಕ್ಕೆ ಹೋಗೋಣ ಅಂತ ಹೇಳಿ ಕರೆದುಕೊಂಡು ಬಂದಿದ್ದಾರೆ. ನಂತರ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ವೇಲಿನಿಂದ ಕತ್ತು ಬಿಗಿದು ಸಾಯಿಸಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ದೋಚಿದ್ದಾರೆ. ನಂತರ ಆಕೆಯ ಚಿನ್ನಾಭರಣವನ್ನು ಫೈನಾನ್ಸ್ ನಲ್ಲಿ ಅಡವಿಟ್ಟು 2.5 ಲಕ್ಷ ಹಣ ಪಡೆದು ಸಾಲ ತೀರಿಸಿ ಮೋಜು ಮಸ್ತಿ ಮಾಡಿದ್ದರು. ಅಪರಿಚಿತ ಶವ ಪತ್ತೆಯಾದಾಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.