ಚಾಲಕ ಫೋನ್‌ ನಲ್ಲಿ ಕ್ರಿಕೆಟ್‌ ನೋಡುವಾಗಲೇ ರೈಲು ಅಪಘಾತ : ಶಾಕಿಂಗ್ ಸತ್ಯ ಬಿಚ್ಚಿಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್…!

ಕಳೆದ ವರ್ಷದ ಅಕ್ಟೋಬರ್ 29ರಂದು ಆಂಧ್ರಪ್ರದೇಶದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ 14 ಮಂದಿ ಮೃತಪಟ್ಟಿದ್ದು, ಇದೀಗ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಅಪಘಾತಕ್ಕೆ ಕಾರಣವಾದ ಹಿಂದಿನ ಶಾಕಿಂಗ್ ಸತ್ಯವನ್ನು ತೆರೆದಿಟ್ಟಿದ್ದಾರೆ.

ಅಂದು ಅಪಘಾತಕ್ಕೆ ಒಳಗಾದ ರಾಯಘಡ ಪ್ಯಾಸೆಂಜರ್ ರೈಲು ಹಾಗೂ ವಿಶಾಖಪಟ್ಟಣಂ ಪಾಲಸ ರೈಲಿನ ಚಾಲಕ ಹಾಗೂ ಸಹ ಚಾಲಕರು ಅಂದು ತಮ್ಮ ಮೊಬೈಲ್ ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. ಇದರಲ್ಲಿ ಅವರು ಮೈಮರೆತಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಅಪಘಾತ ನಡೆದ ಅಂದು ರಾಯಘಡ ಪ್ಯಾಸೆಂಜರ್ ರೈಲು ವಿಶಾಖಪಟ್ಟಣದ ಕಂತಕಪಲ್ಲಿ ಬಳಿ ಹಿಂಬದಿಯಿಂದ ವಿಶಾಖಪಟ್ಟಣಂ ಪಾಲಸ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಮೃತಪಟ್ಟು 50 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು.

ಅಪಘಾತದ ಹಿಂದಿನ ಕಾರಣ ತಿಳಿಯಲು ರೈಲ್ವೆ ಇಲಾಖೆ ತಂಡವನ್ನು ರಚಿಸಿದ್ದು, ಇದರ ವರದಿ ಇನ್ನೂ ಬಹಿರಂಗವಾಗಿಲ್ಲ. ಇದರ ಮಧ್ಯೆ ಶನಿವಾರದಂದು ಮಾತನಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಅಪಘಾತ ಸಂಭವಿಸಿದ ವೇಳೆ ರೈಲು ಚಾಲಕರುಗಳು ತಮ್ಮ ಫೋನ್ ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು ಎಂಬ ಸಂಗತಿಯನ್ನು ತಿಳಿಸಿದ್ದಾರೆ. ಅಲ್ಲದೆ ಚಾಲಕ ಹಾಗೂ ಸಹ ಚಾಲಕರುಗಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಿಯಮಾವಳಿಯನ್ನು ರೂಪಿಸಿದ್ದೇವೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read