ಚಹಾ ಕುಡಿಯೋ ಆಸೆಗೆ ನಡುರಸ್ತೆಯಲ್ಲೇ ಬಸ್‌ ನಿಲ್ಲಿಸಿದ ಡ್ರೈವರ್; ವಿಡಿಯೋ ನೋಡಿ ದಂಗಾದ ಜನ

ಬಿಸಿಲಿರಲಿ, ಮಳೆಯಿರಲಿ ಇಲ್ಲಾ ಚಳಿಯೇ ಇರಲಿ, ಕೈಯಲ್ಲಿ ಬಿಸಿ-ಬಿಸಿ ಟೀ ಇದ್ದರೆ, ಅದರ ಗಮ್ಮತ್ತೇ ಬೇರೆ ಅಂತಾರೆ ಟೀ ಪ್ರಿಯರು. ದಿನದ 24 ಗಂಟೆ ಟೀ ಕೊಟ್ಟರೂ ಎಂಜಾಯ್ ಮಾಡೋರೂ ಇದ್ದಾರೆ. ಕೆಲವರಿಗಂತೂ ಟೀ ಕುಡಿಯೋದೇ ಒಂದು ಚಟವಾಗಿ ಹೋಗಿರುತ್ತೆ. ಇದೇ ಕಾರಣಕ್ಕೋ ಏನೋ ಭಾರತದಲ್ಲಿ ಟೀ ಬಿಸಿನೆಸ್ ಭರ್ಜರಿಯಾಗಿ ನಡೆಯತ್ತೆ.

ಇದು ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿರೋ  ವಿಡಿಯೋ, ಇಲ್ಲಿ ಡ್ರೈವರ್ ಒಬ್ಬ ಏಕಾಏಕಿ ನಡುರಸ್ತೆಯಲ್ಲೇ ಬಸ್ ನಿಲ್ಲಿಸಿದ್ದ. ವಾಹನ ಸವಾರರು ಬಸ್ ಕೆಟ್ಟುಹೋಗಿದ್ದರಿಂದ, ಹೀಗೆ ಬಸ್ ನಿಲ್ಲಿಸಲಾಗಿದೆ ಎಂದು ಅಂದುಕೊಂಡಿದ್ದರು. ಅಸಲಿಗೆ ಬಸ್ ಡ್ರೈವರ್ ರಸ್ತೆ ಪಕ್ಕದಲ್ಲಿರುವ ಚಹದ ಅಂಗಡಿಯನ್ನ ಗಮನಿಸಿದ್ದಾನೆ. ಚಹ ಕುಡಿಯಬೇಕು ಅನ್ನೋ ಆಸೆಗೆ ಬಸ್‌  ನಿಲ್ಲಿಸಿ, ಚಹದ ಅಂಗಡಿಗೆ ಓಡ್ಹೋಗಿ ಚಹ ಕುಡಿದು ಬಂದಿದ್ದ.

ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿದ್ದರಿಂದ, ಕೆಲ ಕಾಲದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಆ ಸಮಯದಲ್ಲಿ ವಾಹನ ಸವಾರರು ಬಸ್ ಚಾಲಕನಿಗೆ ಹಾಕದ ಶಾಪಗಳೇ ಇಲ್ಲ. ಈ ಘಟನೆಯಲ್ಲೇ ಅಲ್ಲೇ ಇದ್ದ ಇನ್ನೊಬ್ಬ ಚಹಾ ಪ್ರಿಯ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡ್ಕೊಂಡು, ತನ್ನ @kadaipaneeeer ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾನೆ.

ಕೇವಲ 25 ಸೆಕೆಂಡ್‌ನ ಈ ವಿಡಿಯೋವನ್ನ ಸುಮಾರು 72 ಸಾವಿರ ಜನ ವೀಕ್ಷಿಸಿದ್ದಾರೆ. ಇದಕ್ಕೆ ತಮಾಷೆಯಾಗಿ ಕಾಮೆಂಟ್ ಕೂಡಾ ಮಾಡಿದ್ದಾರೆ.

https://twitter.com/kadaipaneeeer/status/1609788532620689410?ref_src=twsrc%5Etfw%7Ctwcamp%5Etweetembed%7Ctwterm%5E1609788532620689410%7Ctwgr%5Eeb8f411ec7925d994d9e12d3b5912419c6e53907%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdriver-stops-bus-in-the-middle-of-the-road-to-take-a-chai-break-internet-reacts-to-viral-video-2316845-2023-01-03

https://twitter.com/Anish_RR/status/1609869644575444992?ref_src=twsrc%5Etfw%7Ctwcamp%5Etweetembed%7Ctwterm%5E1609869644575444992%7Ctwgr%5Eeb8f411ec7925d994d9e12d3b5912419c6e53907%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdriver-stops-bus-in-the-middle-of-the-road-to-take-a-chai-break-internet-reacts-to-viral-video-2316845-2023-01-03

https://twitter.com/WKShashank/status/1609985649423323136?ref_src=twsrc%5Etfw%7Ctwcamp%5Etweetembed

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read