ಪಾಟ್ನಾದಲ್ಲಿ ತಡರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಪೊಲೀಸ್ ಸಿಬ್ಬಂದಿ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ಸ್ಟೆಬಲ್ ಸಾವನ್ನಪ್ಪಿ, ಇತರ ಮೂವರು ಗಾಯಗೊಂಡರು.ಘಟನೆಯ ವೀಡಿಯೊ ವೈರಲ್ ಆಗಿದೆ. ಮಧ್ಯರಾತ್ರಿ 12:30 ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಹರಿದಿರುವುದು ಕಂಡುಬಂದಿದೆ.
ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯದಂತೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಅವರು ಕಾರೊಂದನ್ನು ನಿಲ್ಲಿಸಲು ಸೂಚಿಸಿದರು. ಆರಂಭದಲ್ಲಿ, ವಾಹನವು ನಿಂತಿತು, ಆದರೆ ಚಾಲಕ ನಂತರ ಇದ್ದಕ್ಕಿದ್ದಂತೆ ವೇಗದಲ್ಲಿ ಕಾರು ಚಲಾಯಿಸಿ ಪೊಲೀಸರ ಮೇಲೆ ಹರಿಸಿದ್ದಾನೆ. ಪರಿಣಾಮ ಓರ್ವ ಮಹಿಳಾ ಕಾನ್ಸ್ಟೆಬಲ್ ಸಾವನ್ನಪ್ಪಿ, ಇತರ ಮೂವರು ಗಾಯಗೊಂಡರು.
ಘಟನೆಯ ಕುರಿತು ಮಾತನಾಡಿದ ಎಸ್ಎಸ್ಪಿ ಅವಕಾಶ್ ಕುಮಾರ್, “ರಾತ್ರಿ ತಪಾಸಣೆ ನಡೆಯುತ್ತಿತ್ತು. ತಪಾಸಣೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಕಾರು ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.” ಪಾಟ್ನಾದ ಅಟಲ್ ಪಾತ್ನಲ್ಲಿ ಈ ಘಟನೆ ನಡೆದಿದ್ದು, ಗಂಟೆಗೆ ಸುಮಾರು 90 ಕಿ.ಮೀ ವೇಗದಲ್ಲಿ ಕಾರು ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ.
अभी- अभी : पटना के अटल पथ पर वाहन चेकिंग के दौरान भागने को BJP का झंडा लगाई गाड़ी ने कई पुलिस वालों को रौंदा. एसएसपी अवकाश कुमार मौका ए वारदात पर पहुंचे. सूचना समाप्त. pic.twitter.com/QLvM2QQF1R
— Gyaneshwar (@Gyaneshwar_Jour) June 11, 2025