ಆಂಧ್ರಪ್ರದೇಶ : ಟೋಲ್ ಕಟ್ಟದೇ ಮುಂದೆ ನುಗ್ಗಿ ಚಾಲಕನೋರ್ವ ಬೈಕ್ ಸವಾರರ ಮೇಲೆ ಬಸ್ ಹತ್ತಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.ಘಟನೆಯ ಭಯಾನಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕುಶಿನಗರ ಮತ್ತು ಡಿಯೋರಿಯಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರ್ಯ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ದೆಹಲಿ ಮೂಲಕ ಬಿಹಾರಕ್ಕೆ ಹೋಗುತ್ತಿದ್ದ ಖಾಸಗಿ ಐಷಾರಾಮಿ ಬಸ್ ಇದಾಗಿದ್ದು, ಮೋಟಾರ್ ಸೈಕಲ್ನಲ್ಲಿ ಬಂದ ಅಬ್ರಾರ್ ಅನ್ಸಾರಿ (20) ಮತ್ತು ಅವರ ಚಿಕ್ಕಪ್ಪ ಅಲೀಮ್ ಅನ್ಸಾರಿ (50) ಅವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
