ತುಮಕೂರು: ಹಾಸ್ಟೆಲ್ ನಲ್ಲಿ ಕಲುಷಿತ ನೀರು ಸೇವಿಸಿ 12 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಗಹ್ಟನೆ ತುಮಕೂರು ಜಿಲ್ಲೆಯ ಕಿಣಿಗಲ್ ನಲ್ಲಿ ನಡೆದಿದೆ.
ಇಲ್ಲಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಲ್ಲಿ ರಾತ್ರಿ ಊಟ ಸೇವಿಸಿ ನಿರು ಕುಡಿದಿದ್ದ 12 ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥ ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ತೇಲ್ ನಲ್ಲಿ ಒಟ್ಟು 165 ಮಕ್ಕಳಿದ್ದಾರೆ. ಮೂರು ದಿನಗಳ ಹಿಂದೆ ಹಾಸ್ಟೆಲ್ ಸಂಪ್ ಸ್ವಚ್ಛಗೊಳಿಸಲಾಗಿತ್ತು. ಬಳಿಕ ಮತ್ತೆ ನೀರು ತಿಂಬಲಾಗಿತ್ತು. ನೀರು ಸೇವಿಸಿದ ವಿದ್ಯಾರ್ಥಿಗಳು ಅವಸ್ಥರಾಗಿದ್ದು, ಕಲುಷಿತ ನೀರಿನಿಂದಾಗಿ ಬಾಲಕಿಯರು ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ.
12 ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿಯಿಂದ ಬಳಲುತ್ತಿದ್ದು, ನೀರಿನ ಸಂಪ್ ಸ್ವಚ್ಛಗೊಳಿಸಿದ ಬಳಿಕ ಸಮಸ್ಯೆ ಎದುರಾಗಿದೆ. ಇನ್ನೂ ಎರಡು ದಿನ ನೀರಿನ ಕ್ಯಾನ್ ತರಿಸಿ ನೀರು ಪೂರೈಸುವಂತೆ ಸೂಚಿಸಲಾಗಿದ್ದು, ನೀರಿನ ಪರೀಕ್ಷೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.