ಚಳಿಗಾಲದಲ್ಲಿ ಲಿವರ್‌ ಡಿಟಾಕ್ಸ್‌ ಮಾಡಿ ಫಿಟ್‌ ಆಗಿರಲು ಸೇವಿಸಿ ಈ ನೀರು

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ.‌ ಲಿವರ್‌ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಯಕೃತ್ತು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ ಯಾವುದೇ ಅಡಚಣೆ ಉಂಟಾದಲ್ಲಿ ನಮ್ಮ ದೇಹದ ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಚಳಿಗಾಲದಲ್ಲಿ ಲಿವರ್‌ ಡಿಟಾಕ್ಸ್‌ ಮಾಡುವುದರಿಂದ ದೇಹವು ಫಿಟ್‌&ಫೈನ್‌ ಆಗಿರುತ್ತದೆ. ಯಕೃತ್ತನ್ನು ನಿರ್ವಿಷಗೊಳಿಸಲು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿಕೊಂಡು ಕುಡಿಯಿರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ಸೂಕ್ತ. ಯಕೃತ್ತನ್ನು ಡಿಟಾಕ್ಸ್‌ ಮಾಡಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಇದು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು ಕೂಡ ಲಿವರ್‌ ಆರೋಗ್ಯಕ್ಕೆ ಅತ್ಯಗತ್ಯ.

ಆಲ್ಕೋಹಾಲ್ ಸೇವನೆ ಯಕೃತ್ತಿಗೆ ತುಂಬಾ ಹಾನಿ ಮಾಡುತ್ತದೆ. ಹಾಗಾಗಿ ಮದ್ಯಪಾನ ಮಾಡಬೇಡಿ. ಲಿವರ್‌ ಡಿಟಾಕ್ಸ್‌ ಮಾಡಲು ಸಾಕಷ್ಟು ನೀರು ಕುಡಿಯಬೇಕು ದಿನಕ್ಕೆ 8 ಗ್ಲಾಸ್ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಯಕೃತ್ತನ್ನು ನಿರ್ವಿಷಗೊಳಿಸಬಹುದು.ಲಿವರ್ ಆರೋಗ್ಯವಾಗಿರಲು ವ್ಯಾಯಾಮ ಕೂಡ ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಮಾಡುವುದು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read