ತೂಕ ನಷ್ಟವಾಗಲು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ ಈ 5 ಡ್ರಿಂಕ್

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಒಂದು ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಕೆಯಾಗುವುದಿಲ್ಲ. ಅಂತವರು ಚಿಂತಿಸಿ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಬದಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ 5 ಡ್ರಿಂಕ್ ಗಳಲ್ಲಿ ಒಂದನ್ನು ಸೇವಿಸಿ.

*ಜೀರಿಗೆ ನೀರು : 1 ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಹಾಕಿ ಕುದಿಸಿ ರಾತ್ರಿಯಿಡಿ ಹಾಗೇ ಇಟ್ಟು ಬೆಳಿಗ್ಗೆ ಸೇವಿಸಿ. ಇದರಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ.

*ಸೋಂಪಿನ ನೀರು : 1 ಗ್ಲಾಸ್ ನೀರಿಗೆ 1 ಚಮಚ ಸೋಂಪನ್ನು ಹಾಕಿ ಕುದಿಸಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ನಷ್ಟವಾಗುತ್ತದೆ.

*ಓಂಕಾಳಿನ ನೀರು : ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ.

*ನಿಂಬೆ ನೀರು : ನೀರಿಗೆ ನಿಂಬೆ ರಸ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದು ಕೊಬ್ಬನ್ನು ಕರಗಿಸುತ್ತದೆ . ಹೆಚ್ಚುವರಿ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ.

* ಗ್ರೀನ್ ಟೀ : ಬೆಳಿಗ್ಗೆ ಟೀ, ಕಾಫಿ ಕುಡಿಯುವ ಬದಲು ಗ್ರೀನ್ ಟೀ ಕುಡಿದರೆ ನಿಮ್ಮ ಕೊಬ್ಬು ಕರಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read