ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗಲು ಪ್ರತಿದಿನ ಕುಡಿಯಿರಿ ಈ 3 ಬಗೆಯ ಜ್ಯೂಸ್‌

ಮೂತ್ರಪಿಂಡದ ಸಮಸ್ಯೆಗಳು ನಮ್ಮನ್ನು ಹೈರಾಣು ಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಬೆಳೆಯೋದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗ್ಬಿಟ್ಟಿದೆ. ಕಿಡ್ನಿ ಸ್ಟೋನ್‌ ನಿವಾರಣೆಗೆ ಸರ್ಜರಿ ಕೂಡ ಮಾಡಬೇಕಾಗಿ ಬರುತ್ತದೆ. ಹಾಗಾಗಿ ನಿಯಮಿತ ಡಯಟ್‌ ಮತ್ತು ಕೆಲವೊಂದು ನಿರ್ದಿಷ್ಟ ಆಹಾರ ಕ್ರಮದ ಮೂಲಕ ಕಿಡ್ನಿ ಸ್ಟೋನ್‌ ನಿವಾರಣೆ ಮಾಡಿಸಿಕೊಳ್ಳಬಹುದು. ಕೆಲವು ಜ್ಯೂಸ್‌ಗಳು ಕಿಡ್ನಿ ಸ್ಟೋನ್‌ ಅನ್ನು ಹೋಗಲಾಡಿಸುತ್ತವೆ. ಮೂತ್ರಪಿಂಡದ ಕಲ್ಲುಗಳಿಂದ ತೊಂದರೆಗೊಳಗಾಗಿದ್ದರೆ 3 ವಿಧದ ಜ್ಯೂಸ್‌ಗಳನ್ನು ನಿಯತಮಿತವಾಗಿ ಕುಡಿಯಬೇಕು. ಈ ಜ್ಯೂಸ್‌ ಸೇವನೆಯಿಂದ ನೋವು ಕೂಡ ಕಡಿಮೆಯಾಗುತ್ತದೆ.

ಟೊಮೆಟೊ ಜ್ಯೂಸ್‌: ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ ರಸವು ತುಂಬಾ ಉಪಯುಕ್ತವಾಗಿದೆ. ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಂಡು ಕುಡಿಯಿರಿ. ತಯಾರಿಸಿದ ಮಿಶ್ರಣವನ್ನು ಫ್ರಿಡ್ಜ್ ನಲ್ಲಿಟ್ಟು ನಂತರ ಜ್ಯೂಸ್ ರೂಪದಲ್ಲಿ ಸೇವಿಸಬಹುದು.

ನಿಂಬೆ ರಸ : ನಿಂಬೆಯೊಳಗೆ ಸಿಟ್ರಿಕ್ ಆಮ್ಲವಿದೆ. ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಕಿಡ್ನಿ ಕಲ್ಲು ನಿವಾರಣೆಯಾಗುತ್ತದೆ. ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ಈ ಮಿಶ್ರಣವನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ನೀವು ಪರಿಹಾರ  ಪಡೆಯಬಹುದು.

ತುಳಸಿ ರಸ: ತುಳಸಿ ರಸ ಕೂಡ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಉಪಯುಕ್ತವಾಗಿದೆ. ತುಳಸಿ ಎಲೆಗಳ ರಸವನ್ನು ಹೊರತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಬೆಳಿಗ್ಗೆ ಮತ್ತು ಸಂಜೆ ಸೇವಿಸಿ. ಹೀಗೆ ಮಾಡುವುದರಿಂದ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read