ನಿತ್ಯ ಕುಡಿಯಿರಿ ಪೊಟಾಶಿಯಂ ಹೇರಳವಾಗಿರುವ ಎಳನೀರು…!

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದ್ದು ದೇಹತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯ ಎಳನೀರು ಸೇವಿಸುವುದು ಬಹಳ ಒಳ್ಳೆಯದು. ಆಟೋಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳು ಇದನ್ನು ಕುಡಿಯುವುದರಿಂದ ಕಡಿಮೆ ಕ್ಯಾಲರಿಯ ಮೂಲಕ ನೈಸರ್ಗಿಕ ಲಾಭವನ್ನು ಪಡೆಯಬಹುದು.

ಪೊಟಾಶಿಯಂ ಹೇರಳವಾಗಿರುವ ಇದನ್ನು ಬೆಳಗಿನಿಂದ ಮಧ್ಯಾಹ್ನದ ಒಳಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇತರ ಯಾವುದೇ ಹಣ್ಣಿನ ಜ್ಯೂಸ್ ಗಿಂತ ಉತ್ತಮವಾದ ವಿಟಮಿನ್ ಹಾಗೂ ಖನಿಜಾಂಶಗಳು ಎಳನೀರಿನಲ್ಲಿದೆ.

ಕಡಿಮೆ ಕ್ಯಾಲರಿ ಹೊಂದಿರುವ ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಶೀತವಾಗುತ್ತದೆ ಎನ್ನುವವರು ಒಂದು ಕಲ್ಲು ಉಪ್ಪು ಬೆರೆಸಿ ಕುಡಿಯುವುದು ಒಳ್ಳೆಯದು.

ಮಲಬದ್ಧತೆ ಸಮಸ್ಯೆಯನ್ನು ದೂರಮಾಡಿ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಗರ್ಭಿಣಿಯರು ನಿತ್ಯ ಎಳನೀರು ಕುಡಿಯುವುದು ತಾಯಿ ಮಗುವಿಗೆ ಇಬ್ಬರಿಗೂ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read